ಮಹಾರಾಷ್ಟ್ರ ಚುನಾವಣೆಯಲ್ಲಿ 160 ಸೀಟ್‌ ಗೆಲ್ಲಿಸಿಕೊಡುವುದಾಗಿ ಆಫರ್‌ ಬಂದಿತ್ತು – ಶರದ್ ಪವಾರ್ ಬಾಂಬ್‌

Public TV
2 Min Read

– ಮತಗಳ್ಳತನ ಆರೋಪ – ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತ ಪವಾರ್‌
– ಚುನಾವಣೆ ನ್ಯಾಯಯುತ ಅಂತ ಪಾವರ್‌ ಅವ್ರೇ ಹೇಳಿದ್ರು: ಕುಟುಕಿದ ಫಡ್ನವಿಸ್‌

ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Polls 2024) ಸಮಯದಲ್ಲಿ ಇಬ್ಬರು ನನ್ನನ್ನ ಭೇಟಿಯಾಗಿದ್ದರು. 288 ಸ್ಥಾನಗಳ ಪೈಕಿ ವಿಪಕ್ಷಗಳ ಮೈತ್ರಿಕೂಟಕ್ಕೆ 160 ಸ್ಥಾನಗಳನ್ನು ಗೆಲ್ಲಿಸಿಕೊಡುವ ಆಫರ್‌ ನೀಡಿದ್ದರು ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ (Sharad Pawar) ಸ್ಫೋಟಕ ಹೇಳಿಕೆ ನೀಢಿದ್ದಾರೆ.

ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಲಾಗಿದೆ ಎಂದು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಿಸಿದ್ದರು. ರಾಹುಲ್‌ ಗಾಂಧಿ ಹೇಳಿಕೆ ಬೆಂಬಲಿಸಿರುವ ಶರದ್‌ ಪವಾರ್‌ ಮಹಾರಾಷ್ಟ್ರ ಚುನಾವಣೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಮಾಡುತ್ತಿರುವುದೇ ಕಾಂಗ್ರೆಸ್ – ದಾಖಲೆ ಸಮೇತ ರಾಗಾಗೆ ಜೆಡಿಎಸ್ ತಿರುಗೇಟು

ಹೌದು. ನಾಗ್ಪುರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಇಬ್ಬರು ವ್ಯಕ್ತಿಗಳು ನನ್ನನ್ನ ಭೇಟಿಯಾಗಿದ್ದರು. 288 ಸ್ಥಾನಗಳ ಪೈಕಿ ವಿಪಕ್ಷ ಮೈತ್ರಿಕೂಟಕ್ಕೆ 160 ಸ್ಥಾನ ಗೆಲ್ಲಿಸಿಕೊಡುವ ಆಫರ್‌ ಕೊಟ್ಟಿದ್ದರು. ನಾನು ಅವರಿಬ್ಬರನ್ನೂ ರಾಹುಲ್‌ ಗಾಂಧಿ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ. ಆದ್ರೆ ಈ ಆಫರ್‌ ಅನ್ನು ರಾಹುಲ್‌ ತಿರಸ್ಕರಿಸಿದ್ರು. ವಿರೋಧ ಪಕ್ಷಗಳಾದ ನಾವು ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ನಾವು ನೇರವಾಗಿ ಜನರ ಬಳಿಗೆ ಹೋಗಬೇಕು ಅಂತ ಅವರು ಹೇಳಿದ್ದರು ಅಂತ ಪವಾರ್ ತಿಳಿಸಿದರು.

160 ಸೀಟಿಗೆ ಆಫರ್‌ ಬಂದಿತ್ತು. ಆದ್ರೆ ನಾನು ಅವರಿಬ್ಬರ ಬಗ್ಗೆ ಪ್ರಾಮುಖ್ಯತೆ ನೀಡಲಿಲ್ಲ, ಹಾಗಾಗಿ ಅವರಿಬ್ಬರ ಹೆಸರು, ವಿಳಾಸವೂ ನನ್ನ ಬಳಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಸರ್ಕಾರ ಇದ್ದಾಗಲೇ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ? – ಕೆ.ಎನ್‌ ರಾಜಣ್ಣ ಗರಂ

ಪವಾರ್‌ ಈಗ ಏಕೆ ಹೇಳ್ತಿದ್ದಾರೆ? – ಫಡ್ನವಿಸ್‌
ಇನ್ನೂ ಪವಾರ್‌ ಅವರ ಹೇಳಿಕೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದಾರೆ. ರಾಹುಲ್‌ ಗಾಂಧಿ ಮತಗಳ್ಳತನ ಆರೋಪ ಮಾಡಿದ ನಂತರ ಪವಾರ್‌ ಏಕೆ ಈ ವಿಷಯ ಹೇಳ್ತಿದ್ದಾರೆ. ಈ ಹಿಂದೆ ರಾಹುಲ್‌ ಗಾಂಧಿ ಅವರು ಇವಿಎಂ ತಿರುಚಲಾಗಿದೆ ಎಂದು ಆರೋ ಮಾಡಿದಾಗ ಪವಾರ್‌ ಅದನ್ನು ಒಪ್ಪಿರಲಿಲ್ಲ. ಭಾರತದಲ್ಲಿ ಏನೇ ಚುನಾವಣೆಗಳು ನಡೆದರೂ ಮುಕ್ತ ಮತ್ತು ನ್ಯಾಯಯುತವಾಗಿರುತ್ತವೆ ಅಂತ ಅವರೇ ಹೇಳಿದ್ದರೆಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ಹೊತ್ತಲ್ಲೇ 334 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದಲೇ ತೆಗೆದ ಚುನಾವಣಾ ಆಯೋಗ

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳು, ಶಿವಸೇನೆ (ಶಿಂದೆ ಬಣ) ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ಕ್ರಮವಾಗಿ 47 ಮತ್ತು 41 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ ಕೆಲ ತಿಂಗಳ ಹಿಂದಷ್ಟೇ 48 ಲೋಕಸಭಾ ಸ್ಥಾನಗಳ ಪೈಕಿ 30 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ, ಬಿಜೆಪಿ ಮೈತ್ರಿಕೂಟದ ಈ ಗೆಲುವಿಗೆ ಇವಿಎಂ ಅಕ್ರಮ ಹಾಗೂ ದತ್ತಾಂಶ ತಿರುಚುವಿಕೆ ಕಾರಣ ಎಂದು ಆರೋಪಿಸಿತ್ತು.

Share This Article