`ಶಂಷೇರಾ’ ಟ್ರೈಲರ್ ಔಟ್: ಡಬಲ್ ರೋಲ್‌ನಲ್ಲಿ ಮಿಂಚಿದ ರಣ್‌ಬೀರ್ ಕಪೂರ್

Public TV
1 Min Read

ರಣ್‌ಬೀರ್ ಕಪೂರ್ ನಟನೆಯ `ಸಂಜು’ ಬ್ಲಾಕ್ ಬಸ್ಟರ್ ಚಿತ್ರದ ನಂತರ ಇದೀಗ ಶಂಷೇರಾ ಚಿತ್ರದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚ್ತಿದ್ದಾರೆ. ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ʻಶಂಷೇರಾʼ ಚಿತ್ರದ ಝಲಕ್ ಸಖತ್ ಸದ್ದು ಮಾಡುತ್ತಿದೆ.

ನಾಲ್ಕು ವರ್ಷಗಳ ನಂತರ ರಣ್‌ಬೀರ್ ಕಪೂರ್ ಸಿಲ್ವರ್ ಸ್ಕ್ರೀನ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ನಿರೀಕ್ಷಿತ `ಶಂಷೇರಾ’ ಟ್ರೈಲರ್‌ನಿಂದ ವೈರಲ್ ಆಗ್ತಿದ್ದಾರೆ. ಇದೇ ಜುಲೈ 22ಕ್ಕೆ ತೆರೆಗೆ ಅಪ್ಪಳಿಸುವ `ಶಂಷೇರಾ’ ರಿಲೀಸ್‌ಗೂ ಮುನ್ನ ಸಖತ್ ಸದ್ದು ಮಾಡುತ್ತಿದೆ. ದ್ವಿಪಾತ್ರದಲ್ಲಿ ರಣ್‌ಬೀರ್ ಮಿಂಚಿದ್ದಾರೆ. ತಂದೆ ಹಾಗೂ ಮಗನಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

1800 ಕಾಲಘಟ್ಟದ ಕಥೆಯಲ್ಲಿ ಡಕಾಯಿತನಾಗಿ ಕಾಣಿಸಿಕೊಂಡಿದ್ದಾರೆ. ಬ್ರಿಟಿಷರ್ ವಿರುದ್ಧ ಹೋರಾಡುವ ಪಾತ್ರಕ್ಕೆ ರಣ್‌ಬೀರ್ ಜೀವತುಂಬಿದ್ದಾರೆ. ಸಂಜಯ್ ದತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಟ್ರೈಲರ್‌ನ ಹೈಲೆಟ್ ಆಗಿದೆ. ರಣ್‌ಬೀರ್ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಉದ್ದನೆಯ ಕೂದಲು ಬಿಟ್ಟಿದ್ದಾರೆ. ಭಿನ್ನ ಅವತಾರ ಮತ್ತು ದ್ವಿಪಾತ್ರದಿಂದ ಗಮನ ಸೆಳೆದಿದ್ದಾರೆ.

ಯಶ್ ರಾಜ್ ಫಿಲ್ಮ್ಂ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ರಣ್‌ಬೀರ್‌ಗೆ ನಾಯಕಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ. ಜುಲೈ 22ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *