ರಣ್‌ಬೀರ್ ಕಪೂರ್ ನಟನೆಯ `ಶಂಶೇರಾ’ ಪೋಸ್ಟರ್ ಲೀಕ್

Public TV
0 Min Read

ಣ್‌ಬೀರ್ ಕಪೂರ್ ಆಲಿಯಾ ನಟನೆಯ ಅಭಿನಯದ `ಬ್ರಹ್ಮಾಸ್ತ್ರ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಳ್ತಿರುವ ಬೆನ್ನಲ್ಲೇ ರಣ್‌ಬೀರ್ ನಟನೆಯ ‌ʻಶಂಶೇರಾʼ ಚಿತ್ರದ ಪೋಸ್ಟರ್ ಲೀಕ್ ಆಗಿದೆ. ರಣ್‌ಬೀರ್ ಹೊಸ ಅವತಾರ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

ಬಾಲಿವುಡ್‌ನಲ್ಲಿ `ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್‌ಗೂ ಮುನ್ನವೇ ಭರವಸೆ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ `ಬ್ರಹ್ಮಾಸ್ತ್ರ’ ಸಖತ್ ಸದ್ದು ಮಾಡುತ್ತಿರುವ ಈ ವೇಳೆಯಲ್ಲಿ ರಣ್‌ಬೀರ್ ಕಪೂರ್ ಅವರ ಮುಂದಿನ ಚಿತ್ರ `ಶಂಶೇರಾ’ದ ಪೋಸ್ಟರ್ ಲೀಕ್ ಆಗಿದೆ. ರಣ್‌ಬೀರ್ ಅವರ ಮುಂದಿನ ಚಿತ್ರ `ಶಂಶೇರಾ’ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದನ್ನೂ ಓದಿ:ಹೊಸ ಮನೆಯ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಕವಿತಾ ಗೌಡ- ಚಂದನ್

 

View this post on Instagram

 

A post shared by Ranbir Kapoor彡 (@ranbir__kapoor82)

ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣದ `ಶಂಶೇರಾ’ ಚಿತ್ರದ ರಣ್‌ಬೀರ್ ಕಪೂರ್ ರಗಡ್ ಲುಕ್ ನೋಡಿ, ಇದೀಗ ಫ್ಯಾನ್ಸ್ ಬೆರಗಾಗಿದ್ದಾರೆ. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರಣ್‌ಬೀರ್ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ವಾಣಿ ಕಪೂರ್‌ಗೆ ರಣ್‌ಬೀರ್‌ ಜೋಡಿಯಾಗಿದ್ದಾರೆ. ಸಂಜಯ್ ದತ್ತ್ ಕೂಡ ಸಾಥ್ ನೀಡಿದ್ದಾರೆ. `ಶಂಶೇರಾ’ ಜುಲೈ 22 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *