ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್‌ಗೆ ಬಸವಣ್ಣನವರ ಹೆಸರು ಹೇಳುವ ಯೋಗ್ಯತೆ ಇಲ್ಲ – ಮಾವಳ್ಳಿ ಶಂಕರ್

Public TV
1 Min Read

ವಿಜಯಪುರ: ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್‌ಗೆ ಬಸವಣ್ಣನವರ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದಿದ್ದ ಕಾಂತರಾಜು ಆಯೋಗ ಜಾರಿಗೆ ವಿರೋಧ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ, ಇವರಿಗೆ ಬಸವಾದಿ ಶರಣರಲ್ಲಿ ನಂಬಿಕೆಯಿದ್ದರೆ ಅವರ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನೈತಿಕವಾಗಿ ಅವರ ತತ್ವಗಳಲ್ಲಿ, ವಿಚಾರಗಳಲ್ಲಿ ನಂಬಿಕೆಯಿದ್ದರೆ ಇದನ್ನೆಲ್ಲ ಬಿಡಬೇಕು. ಬಸವಣ್ಣನವರ ಹೆಸರು ಹೇಳಲು ಇವರಿಗೆ ಯಾವುದೇ ಯೋಗ್ಯತೆ ಇಲ್ಲ ಎಂದು ಟಾಂಗ್ ನೀಡಿದರು.ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದವರ ವಿರುದ್ಧ ಕ್ರಮ: ಬೋಸರಾಜು

ಇವರೆಲ್ಲ ಬಸವಣ್ಣನವರ ಬಗ್ಗೆ ಹೇಳುತ್ತಾ, ಅವರ ವಿಚಾರಗಳಿಗೆ ವಿರುದ್ಧವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನವರು ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂತರಾಜು ಸಮೀಕ್ಷಾ ವರದಿ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಯಾವ ಬಾಯಿಂದ ವಿರೋಧ ಮಾಡುತ್ತಾರೆ ಎಂದು ಕಿಡಿಕಾರಿದರು.

ಎಸ್ಸಿ-ಎಸ್ಟಿ, ಒಬಿಸಿ, ದಲಿತರು, ಅಲ್ಪಸಂಖ್ಯಾತರಿಂದಲೇ ಇವತ್ತು ಕಾಂಗ್ರೆಸ್ ಹಿಂದೆ ಇದ್ದಾರೆ. ಯಾವ ರೀತಿ ದೇವರಾಜ ಅರಸು ಅವರು ಏಕಾಂಗಿಯಾಗಿ ಹಾವನೂರು ಅವರ ವರದಿ ಜಾರಿ ಮಾಡಿದರೋ, ಅದೇ ರೀತಿ ಇಚ್ಛಾಶಕ್ತಿ, ಬದ್ಧತೆಯನ್ನು ಸಿದ್ಧರಾಮಯ್ಯನವರು ತೋರಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಮಹದಾಯಿ ಬಗ್ಗೆ ಇಲ್ಲಿವರೆಗೆ ಕಾಂಗ್ರೆಸ್‌ನವರು ಏನು ಮಾಡಿದ್ದೀರಿ: ಜೋಶಿ ಪ್ರಶ್ನೆ

Share This Article