ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಶಕ್ತಿ ಯೋಜನೆಯೇ ಸಾಕ್ಷಿ: ದಿನೇಶ್ ಗುಂಡೂರಾವ್

Public TV
1 Min Read

ಬೆಂಗಳೂರು: ಮಹಿಳೆಯರ ಉಚಿತ ಬಸ್ (Free Bus Ticket For Women) ಪ್ರಯಾಣಕ್ಕೆ ಇಂದು ಚಾಲನೆ ಸಿಗಲಿದ್ದು, ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯೇ ಸಾಕ್ಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ (Tweet) ಮಾಡಿರುವ ಅವರು ತಮ್ಮ ವಿರೋಧಿಗಳಿಗೆ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- 4 ಕಿ.ಮೀ ಬಸ್‍ನಲ್ಲಿ ಸಿಎಂ ಸಂಚಾರ

ಟ್ವೀಟ್‍ನಲ್ಲೇನಿದೆ..?: ನಮ್ಮ ಸರ್ಕಾರದ 5 ಗ್ಯಾರಂಟಿಗಳ (Congress 5 Guarantee) ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಇಂದಿನಿಂದ ಅನುಷ್ಠಾನವಾಗಲಿದೆ. ನಾವು ಅಧಿಕಾರಕ್ಕೆ ಬಂದ 1 ತಿಂಗಳ ಒಳಗೇ ಈ ಯೋಜನೆ ಅನುಷ್ಠಾನವಾಗುತ್ತಿರುವುದು ಸಾರ್ಥಕತೆ ಮೂಡಿಸಿದೆ. ನಾನು ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡದ ಬಿಜೈನ KSRTC ನಿಗಮದಲ್ಲಿ ನಾನು ಈ ಯೋಜನೆಗೆ ಇಂದು ಚಾಲನೆ ನೀಡಲಿದ್ದೇನೆ.

ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಹಾಗೂ ಕೆಲ ಪಟ್ಟಭಧ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸಿದ್ದರು. ಈ ಯೋಜನೆಗಳು ಅನುಷ್ಟಾನವಾಗುವುದೇ ಇಲ್ಲ ಎಂದು ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಠಾನವಾಗುತ್ತಿರುವ ‘ಶಕ್ತಿ’ ಯೋಜನೆಯೇ ಸಾಕ್ಷಿ.

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಅನುಷ್ಠಾನವಾಗುತ್ತಿರುವುದು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತೀಕ. ಇದೇ ರೀತಿ ‘ಅನ್ನಭಾಗ್ಯ’,’ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಮತ್ತು ‘ಯುವನಿಧಿ’ ಯೋಜನೆಗಳು ಕೂಡ ಜಾರಿಯಾಗಲಿವೆ. ಈ ಬಗ್ಗೆ ರಾಜಕೀಯ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಲಿ, ಈ ಯೋಜನೆಗಳು ಜನರಿಗೆ ತಲುಪುವುದು ಖಚಿತ ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಇಂದಿನಿಂದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫ್ರೀ ಬಸ್‍ಗೆ ಚಾಲನೆ ನೀಡಲಿದ್ದಾರೆ.

 

Share This Article