ಶಕ್ತಿ ಯೋಜನೆಯಲ್ಲೂ ದೋಖಾ? – ಮಹಿಳೆಯರ ಫ್ರೀ ಬಸ್ ಪ್ರಯಾಣ ಟಿಕೆಟ್ ಪುರುಷರಿಗೆ ವಿತರಣೆ

Public TV
1 Min Read

– ಚಾಮರಾಜನಗರದಲ್ಲಿ ಕೆಎಸ್‌ಆರ್‌ಟಿಸಿ ಕಂಡಕ್ಟರ್ ವಿರುದ್ಧ ವಿದ್ಯಾರ್ಥಿಗಳ ದೂರು

ಚಾಮರಾಜನಗರ: ಮಹಿಳೆಯರ ಅನುಕೂಲಕ್ಕಾಗಿ ಜಾರಿಗೆ ತಂದಿದ್ದ ಶಕ್ತಿ ಯೋಜನೆ (ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ)ಯಲ್ಲಿ ದೋಖಾ ನಡೆದಿರುವ ಪ್ರಶ್ನೆ ಉದ್ಭವಿಸಿದೆ. ಮಹಿಳೆಯರ ಫ್ರೀ ಬಸ್ ಟಿಕೆಟ್ ಅನ್ನು ಪುರುಷರಿಗೆ ವಿತರಿಸಿರುವ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

ಹಣ ಹೊಡೆಯುವ ಕೆಲಸಕ್ಕೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮುಂದಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ. ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿಗೆ ಮತ್ತೊಂದು ಸಂಕಷ್ಟ?; 1.84 ಕೋಟಿ ಹೇಗೆ ಬಂತು ಅಂತ ವಿಚಾರಣೆ ಮಾಡಲು ಇಡಿಗೆ ದೂರು

ನಿನ್ನೆ ಬೇಡರಪುರದಿಂದ ಚಾಮರಾಜನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಗಳು ಸಂಚಾರ ಮಾಡಿದ್ದರು. ಈ ವೇಳೆ ಹಣ ಪಡೆದು ಮಹಿಳೆಯರ ಉಚಿತ ಬಸ್ ಪ್ರಯಾಣದ ಟಿಕೆಟ್ ವಿತರಣೆ ಮಾಡಿದ್ದಾರೆ. ಈ ವಿಚಾರವಾಗಿ ವಿದ್ಯಾರ್ಥಿಗಳು ಕಂಡಕ್ಟರ್‌ನ್ನು ಪ್ರಶ್ನಿಸಿದ್ದಾರೆ. ಆಗ ಟಿಕೆಟ್ ಕೊಟ್ಟ ನಡೆಯನ್ನು ಕಂಡಕ್ಟರ್ ಸಮರ್ಥಿಸಿಕೊಂಡಿದ್ದರು ಎಂದು ಸಹ ಆರೋಪಿಸಲಾಗಿದೆ.

ಕಂಡಕ್ಟರ್ ನಡೆ ಖಂಡಿಸಿ ಸರ್ಕಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ನಮಗಷ್ಟೇ ಅಲ್ಲ ಬಸ್‌ನಲ್ಲಿದ್ದ ಇನ್ನೂ ಕೆಲವರಿಗೂ ಕೂಡ ಮಹಿಳೆಯರ ಉಚಿತ ಬಸ್ ಪ್ರಯಾಣ ಟಿಕೆಟ್ ವಿತರಿಸಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

Share This Article