ಎರಡು ಎಕರೆ ಜಮೀನು ಖರೀದಿಸಿದ ಶಾರುಖ್ ಪುತ್ರಿ ಸುಹಾನಾ ಖಾನ್

Public TV
1 Min Read

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan)  ಪುತ್ರಿ ಸುಹಾನಾ (Suhana Khan) ರಿಯಲ್ ಎಸ್ಟೇಟ್ (Real Estate) ಉದ್ಯಮಕ್ಕೆ ಕಾಲಿಟ್ಟಿದ್ದೀರಾ? ಹಾಗಂತ ಮಾತನಾಡುತ್ತಿದೆ ಬಿಟೌನ್. ಮುಂಬೈ ಸಮೀಪದ ಅಲಿಭಾಗ್ ನಲ್ಲಿ ಸುಹಾನಾ ಬರೋಬ್ಬರಿ ಎರಡು ಎಕರೆ ಜಮೀನು ಖರೀದಿಸಿದ್ದಾರಂತೆ. ಹಾಗಾಗಿ ಸುಹಾನಾ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲಿದ್ದಾರೆ ಎನ್ನುವ ಅನುಮಾನ ಮೂಡಿದೆ.

ಈ ಜಮೀನಿಗಾಗಿ ಅವರು 12.91 ಕೋಟಿ ರೂಪಾಯಿ ನೀಡಿದ್ದು, ಈ ಪ್ರಮಾಣದ ಹಣ ತೊಡಗಿಸಿದ್ದು ಅವರ ಹೊಸ ಯೋಜನೆಗಾಗಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸುಹಾನಾ ಸಿನಿಮಾ ರಂಗದಲ್ಲೇ ಸಕ್ರೀಯರಾಗುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರವೊಂದರಲ್ಲಿ ನಟಿಸಿದ್ದರು. ಈಗ ರಿಯಲ್ ಎಸ್ಟೇಟ್ ನಲ್ಲಿ ಭಾರೀ ಹೂಡಿಕೆ ಮಾಡಿದ್ದಾರೆ.

ಸುಹಾನಾ ಖಾನ್ ದುಬಾರಿ ಹುಡುಗಿ ಎಂದೇ ಫೇಮಸ್. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಾಗ ಅವರ ಧರಿಸುವ ಬಟ್ಟೆಗಳ ಬೆಲೆ ಬಗ್ಗೆ ಯಾವತ್ತಿಗೂ ಚರ್ಚೆ ಆಗುತ್ತದೆ.  ಇತ್ತೀಚೆಗೆ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದ ಸುಹಾನಾ ಬರೋಬ್ಬರಿ 69,574 ರೂ. ಬೆಲೆಯ ಶೂ ಧರಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಕೇವಲ ಸಿನಿಮಾ ನಟ-ನಟಿಯರು ಹೆಚ್ಚು ಬೆಲೆ ಬಾಳುವ ಶೂ ಮತ್ತು ಬಟ್ಟೆಗಳನ್ನು ಧರಿಸುತ್ತಾರೆ ಎಂಬ ಮಾತನ್ನು ಸುಹಾನ ಸುಳ್ಳು ಮಾಡಿದ್ದರು.

 

ಸುಹನಾ ತನ್ನ ಗೆಳತಿಯರಾದ ಶನಯಾ ಕಪೂರ್ ಮತ್ತು ಅಹನಾ ಪಾಂಡ್ಯೆ ರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದರು. ನೀಲಿ ಬಣ್ಣದ ಟೋನ್ ಜೀನ್ಸ್ ಜೊತೆಗೆ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದ ಸುಹನಾ ಕ್ಲಾಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅವೆಲ್ಲವೂ ದುಬಾರಿ ಬೆಲೆಯದ್ದು ಆಗಿದ್ದವು.

Share This Article