ಬಾಲಿವುಡ್ ಗೆ ಎಂಟ್ರಿ ಕೊಡಲು ತಯಾರಾದ್ರಾ ಶಾರೂಖ್ ಖಾನ್ ಪುತ್ರಿ!

Public TV
1 Min Read

ಮುಂಬೈ: ಬಾಲಿವುಡ್‍ ನಲ್ಲಿ ಸ್ಟಾರ್ ನಟರ ಮಕ್ಕಳು ಬಣ್ಣ ಹಚ್ಚಿ ಕ್ಯಾಮೆರಾಗೆ ಕಣ್ಣು ಹೊಡೆಯೊದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಾಗೆಯೇ ಈಗ ಬಿ-ಟೌನ್ ಬಿಗ್ ಸ್ಟಾರ್ ನಟನ ಪುತ್ರಿಯೊಬ್ಬರು ಬಣ್ಣದ ಬದುಕೆಗೆ ಬಲಗಾಲಿಟ್ಟು ಬರಲು ಜೆಮ್‍ ನಲ್ಲಿ ಬೆವರಿಳಿಸುತ್ತಿದ್ದಾರೆ.

ಹೌದು. ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಪುತ್ರಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ, ತಂದೆಯ ಜೊತೆಗೆ ಫಂಕ್ಷನ್‍ ಗಳಿಗೆ ಬರುತ್ತಿದ್ದ ಸುಹಾನಾ ಖಾನ್ ಬಾಳೆ ಮರದ ರೀತಿ ಬೆಳಿದು ನಿಂತಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆ ಫೋಟೋಗ್ರಾಫರ್‍ ಗಳು ಮುತ್ತಿಕೊಂಡು ಕ್ಯಾಮೆರಾ ಪಟ್ಟಪಟನೇ ಕ್ಲಿಕಿಸುವಂತೆ ಮಾಡುವ ಚೆಂದುಳಿ ಚೆಲುವೆಯಾಗಿದ್ದಾರೆ.

ಶಾರುಖ್ ಪುತ್ರಿಯ ಬೆಡಗು ಬಿನ್ನಾಣಕ್ಕೀಗ ಬಾಲಿವುಡ್‍ ನಿಂದ ಬೇಜಾನ್ ಆಫರ್‍ ಗಳು ಬರುತ್ತಿವೆ. ನಮ್ಮ ಬ್ಯಾನರ್‍ನಲ್ಲಿ ನಿಮ್ಮ ಮಗಳನ್ನ ಗ್ರ್ಯಾಂಡ್ ಆಗಿ ಇಂಟ್ರೊಡ್ಯೂಸ್ ಮಾಡುತ್ತೇವೆ ಎಂದು ಪ್ರೋಡ್ಯೂಸರ್‍ಗಳು ಕ್ಯೂ ನಿಂತಿದ್ದಾರೆ. ಅಷ್ಟರ ಮಟ್ಟಿಗೆ ಸುಹಾನಾ ಮೋಡಿ ಮಾಡಿದ್ದಾರೆ.

ಇನ್ನು ಸುಹಾನಾಗೆ ಕೇವಲ 17ರ ಹರೆಯ. ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿ ಪಿಯುಸಿ ಒದುತ್ತಿದ್ದಾರೆ ಅಷ್ಟೇ. ಅಷ್ಟರಲ್ಲಿ ಬಾಲಿವುಡ್‍ ನ ದೊಡ್ಡ ದೊಡ್ಡ ಬ್ಯಾನರ್‍ ಗಳಿಂದ ಆಫರ್ ಬರಲು ಕಾರಣವೇನು? ಎಂದು ದುರ್ಬಿನ್ ಹಾಕಿ ನೋಡಿದಾಗ ಸಿಕ್ಕ ಉತ್ತರವೇ ಈ ವಿಡಿಯೋ.

ಸುಹಾನಾ ಖಾನ್ ಜಿಮ್‍ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಟಾಪ್ ಹೀರೋಯಿನ್ ಗಳಾದ ಕತ್ರಿನಾ ಕೈಫ್, ಅಲಿಯಾ ಭಟ್, ಜಾಕ್ವೆಲಿನ್ ಫರ್ನಾಂಡಿಸ್ ರೀತಿ ವರ್ಕೌಟ್ ಮಾಡುತ್ತಿದ್ದಾರೆ.

ಸದ್ಯ ಬಾಲಿವುಡ್‍ನಲ್ಲಿ ಶಾರೂಖ್ ಪುತ್ರಿ ಸುಹಾನಾಗೆ ಭರ್ಜರಿ ಆಫರ್‍ಗಳು ಬರುತ್ತಿವೆ. ಅವಕಾಶಕ್ಕೆ ತಕ್ಕ ಹಾಗೇ ಸುಹಾನಾ ಜಿಮ್‍ನಲ್ಲಿ ಭರ್ಜರಿ ಕಸರತ್ತು ಮಾಡುವ ಮೂಲಕ ಬೇವರಿಳಿಸುತ್ತಿದ್ದಾರೆ. ಎಲ್ಲಾ ಕಸರತ್ತು ನೋಡಿದ ಬಾಲಿವುಡ್ ಸಿನಿಪಂಡಿತರು, ಓಹೋ ಶಾರೂಖ್ ಪುತ್ರಿ ಸಿನ್ಮಾ-ಗಿನ್ಮಾ ಮಾಡ್ತಿರಬೇಕು, ಅದಕ್ಕೆ ಇಷ್ಟೆಲ್ಲಾ ಬೆವರು ಸುರಿಸುತ್ತಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

https://www.youtube.com/watch?v=G-qY8dEYATo

Share This Article
Leave a Comment

Leave a Reply

Your email address will not be published. Required fields are marked *