ಪಾಕ್ ಜೊತೆ ಮಾತುಕತೆಗೆ ರಾಹುಲ್ ನಂಬಿಕೆ: ಆಫ್ರಿದಿ ಶ್ಲಾಘನೆ

Public TV
1 Min Read

ಇಸ್ಲಾಮಾಬಾದ್‌: ಭಾರತ -ಪಾಕಿಸ್ತಾನ (India-Pakistan) ಮಧ್ಯೆ ಏಷ್ಯಾ ಕಪ್‌ನಲ್ಲಿ (Asia Cup) ಹ್ಯಾಂಡ್‌ಶೇಕ್ ಆಗದೇ ಇರುವ ವಿಚಾರ ಈಗ ರಾಜಕೀಯದವರೆಗೆ ಎಳೆದುಕೊಂಡು ಬಂದಿದೆ. ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ (Shahid Afridi) ಪಾಕ್ ಟಿವಿಯೊಂದರಲ್ಲಿ ಮಾತಾಡುತ್ತಾ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಹೊಗಳಿದ್ದಾರೆ.

ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಧರ್ಮದ ಕಾರ್ಡ್ ಪ್ಲೇ ಮಾಡುತ್ತದೆ. ಆದರೆ, ಅಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ತುಂಬಾ ಸಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ. ಅವರು ಪಾಕ್ ಜೊತೆ ಮಾತುಕತೆಯಲ್ಲಿ ನಂಬಿಕೆ ಇಡುತ್ತಾರೆ ಎಂದಿದ್ದಾರೆ.  ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ

ತಮ್ಮ ಮಾತಿನಲ್ಲಿ ಭಾರತವನ್ನು ಇಸ್ರೇಲ್‌ಗೆ (Israel) ಮತ್ತು ಪಾಕಿಸ್ತಾನವನ್ನು ಗಾಜಾಗೆ ಹೋಲಿಸುವ ಮೂಲಕ ಪ್ರಧಾನಿ ಮೋದಿ (Narendra Modi) ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಆಫ್ರಿದಿ ಈ ಮಾತಿಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಕೌಂಟರ್ ಕೊಟ್ಟಿದ್ದಾರೆ. ಭಾರತದ ಪ್ರತಿದ್ವೇಷಿಯೂ ಯಾಕೆ ರಾಹುಲ್ ಗಾಂಧಿಯನ್ನು ಸ್ನೇಹಿತನಂತೆ ಕಾಣ್ತಾರೆ? ಭಾರತದ ಶತ್ರುಗಳು ನಿಮ್ಮನ್ನು ಹೊಗಳುತ್ತಾರೆ ಅನ್ನೋದಾದರೆ ನಿಮ್ಮ ದೇಶಪ್ರೇಮ ಎಂಥದ್ದು ಅಂತ ಗೊತ್ತಾಗೋದಿಲ್ವೇ ಎಂದು ರಾಹುಲ್ ಹಾಗೂ ಕಾಂಗ್ರೆಸ್‌ಗೆ ಕುಟುಕಿದ್ದಾರೆ.

Share This Article