ಧೋನಿ ಇದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕಿರಲಿಲ್ಲ – ಅಫ್ರಿದಿ

Public TV
1 Min Read

ಇಸ್ಲಾಮಾಬಾದ್: ಟೀಂ ಇಂಡಿಯಾ (Team India) ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಇದ್ದಾಗ ಟೀಂ ಇಂಡಿಯಾಕ್ಕೆ ಪಾಕಿಸ್ತಾನ (Pakistan) ಲೆಕ್ಕಕ್ಕೇ ಇರಲಿಲ್ಲ. ಟೀಂ ಇಂಡಿಯಾ ಪಾಕಿಸ್ತಾನವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂದು ಪಾಕಿಸ್ತಾನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ (Shahid Afridi) ನೆನಪಿಸಿಕೊಂಡಿದ್ದಾರೆ.

ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಕಡೆಗಣಿಸಿ, ದಕ್ಷಿಣ ಆಫ್ರಿಕಾ (South Africa), ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಿತು. ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಸತತವಾಗಿ ಗೆಲ್ಲುತ್ತಿದ್ದರು. ಪ್ರತಿ ಬಾರಿ ಪಂದ್ಯ ಆಡುವಾಗಲೂ ಪಾಕಿಸ್ತಾನಕ್ಕೆ ಸೋಲು ಖಚಿತವಾಗಿರುತ್ತಿತ್ತು. ಭಾರತವು ಈಗ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನೊಂದಿಗೆ ಹೆಚ್ಚು ಸ್ಪರ್ಧಿಸಲು ಪ್ರಾರಂಭಿಸಿದ್ದು, ಹಿಂದಿನಂತೆ ಭಿನ್ನವಾಗಿ ತಮ್ಮ ಮನಸ್ಥಿತಿ ಬದಲಾಯಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಸಾವಿನ ನೋವಿನಲ್ಲೂ ಟೀಂ ಇಂಡಿಯಾ ವಿರುದ್ಧ ಹೋರಾಡಿದ ಮಿಲ್ಲರ್

2021ರ T20 ವಿಶ್ವಕಪ್ (T20 WorldCup) ವರೆಗೆ, ಪಾಕಿಸ್ತಾನವು ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ಒಂದೇ ಒಂದು ಪಂದ್ಯದಲ್ಲೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಸತತವಾಗಿ 7 ಏಕದಿನ ಪಂದ್ಯಗಳು ಮತ್ತು 5 T20 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

1992ರಿಂದ 2021ರ ವರೆಗೆ ಪಾಕಿಸ್ತಾನಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ (AisaCup 2022) ಒಂದು ಪಂದ್ಯದಲ್ಲಿ ಸೋತರೂ ಮತ್ತೊಂದು ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು. ಕಳೆದ ವರ್ಷದ T20 ವಿಶ್ವಕಪ್‌ನಲ್ಲಿಯೂ ಭಾರತ ತಂಡದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಗಳಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *