ಶಾರುಖ್ ಹುಟ್ಟುಹಬ್ಬ: ನಟನ ಮನೆಮುಂದೆ ಪೊಲೀಸ್ ಸರ್ಪಗಾವಲು

By
1 Min Read

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಹುಟ್ಟು ಹಬ್ಬವನ್ನು (Birthday) ಅವರ ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯಿಂದಲೇ ಆಚರಿಸುತ್ತಿದ್ದಾರೆ. ಶಾರುಖ್ ಮನೆ ಮುಂದೆ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ನಟನೆ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ನಿಯೋಜನೆಯಾಗಿದೆ. ರಾತ್ರಿಯೇ ತಮ್ಮ ಮನೆಯ ಟೆರಸ್ ನಿಂದ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದಗಳನ್ನು ಹೇಳಿದ್ದಾರೆ ಶಾರುಖ್. ಮತ್ತೆ ಬೆಳಗ್ಗೆ ಸಿಗುವುದಾಗಿ ತಿಳಿಸಿದ್ದಾರೆ.

ಇಂದು ಓಟಿಟಿಯಲ್ಲಿ ಜವಾನ್

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಈವರೆಗಿನ ಕಲೆಕ್ಷನ್ 1103.27 ಕೋಟಿ ರೂಪಾಯಿಗೂ ಹೆಚ್ಚು ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಣೆ ಮಾಡಿದೆ. ಶಾರುಖ್ ಖಾನ್ ಅವರ ರೆಡ್ ಚಿಲ್ಲಿ ಎಂಟರ್ ಟೇನ್ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಳ್ಳುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ಇದು ವಿಶ್ವದಾದ್ಯಂತ ಬಂದ ಒಟ್ಟು ಕಲೆಕ್ಷನ್ ಆಗಿತ್ತು.

ವಿಶ್ವದಾದ್ಯಂತ ‘ಜವಾನ್’ ಸಿನಿಮಾ ದಾಖಲೆ ರೀತಿಯಲ್ಲಿ ಕಲೆಕ್ಷನ್ (Collection) ಮಾಡಿದರೆ, ಭಾರತದಲ್ಲೇ ಅದು ಗಳಿಸಿದ ಒಟ್ಟು ಮೊತ್ತ ಅಂದಾಜು 600 ಕೋಟಿ ರೂಪಾಯಿಗೂ ಹೆಚ್ಚು ಆಗಿದೆ. ಈ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ದಾಖಲೆ ಕೂಡ ಬರೆದಿದೆ. ಇದೆಲ್ಲವೂ ಅಧಿಕೃತ ಘೋಷಣೆ ಎನ್ನುವುದು ವಿಶೇಷ.

 

ಸಿನಿಮಾ ಭರ್ಜರಿ ಗೆಲುವು ಕಾಣುತ್ತಿದ್ದಂತೆಯೇ ಸಿನಿಮಾ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ. ಜೊತೆಗೆ ಶಾರುಖ್ ಹುಟ್ಟು ಹಬಕ್ಕಾಗಿ ಇಂದು ಜವಾನ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್