4 ಪುಟಗಳ ಹೇಳಿಕೆ ನೀಡಿದ ಆರ್ಯನ್ ಖಾನ್

Public TV
1 Min Read

ಮುಂಬೈ: ಸಮುದ್ರದ ತೀರದಲ್ಲಿ ಐಶಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದ ತನಿಖೆ ಮುಂದುವರಿದಿದೆ. ಸರಣಿ ಪ್ರಶ್ನೆಗಳ ಮೂಲಕ ಶಾರೂಖ್ ಪುತ್ರ ಆರ್ಯನ್ ಖಾನ್ ಮತ್ತು ಇತರರನ್ನು ಎನ್‍ಸಿಬಿ ವಿಚಾರಣೆಗೆ ಒಳಪಡಿಸಿದೆ.

ತನಿಖೆಗೆ ಆರ್ಯನ್ ಖಾನ್ ಸಹಕರಿಸುತ್ತಿದ್ದು, ನಾಲ್ಕು ಪುಟಗಳಷ್ಟು ಹೇಳಿಕೆಯನ್ನು ನೀಡಿದ್ದಾರೆ. ವಿಚಾರಣೆ ವೇಳೆ ಆರ್ಯನ್ ಖಾನ್‍ಗೆ ಎನ್‍ಸಿಬಿ ಯಾವುದೇ ವಿಶೇಷ ಸವಲತ್ತನ್ನು ನೀಡಿಲ್ಲ.

ಎನ್‍ಸಿಬಿಯ ಮೆಸ್‍ನ ಸಿಂಪಲ್ ಊಟವನ್ನೇ ನೀಡಲಾಗಿದೆ. ರೇವ್ ಪಾರ್ಟಿಗೆ ಮಾದಕವಸ್ತು ಪೂರೈಸಿರುವ ಶಂಕೆ ಮೇರೆಗೆ ಕಳೆದ ರಾತ್ರಿ ಇಬ್ಬರು ಡ್ರಗ್ ಪೆಡ್ಲರ್‌ಗಳು,  ನಾಲ್ವರು ಇವೆಂಟ್ ಮ್ಯಾನೇಜರ್‌ಗಳನ್ನು  ಎನ್‌ಸಿಬಿ  ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 12ಕ್ಕೆ  ಏರಿದೆ.

ರೇವ್‍ಪಾರ್ಟಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ, ರಾತ್ರಿ ವಶಕ್ಕೆ ಪಡೆಯಲಾದ ಡ್ರಗ್ ಪೆಡ್ಲರ್‌ಗಳ ನಂಟಿದೆ. ವಾಟ್ಸಪ್‍ನಲ್ಲಿ ಕೋಡ್‍ವರ್ಡ್ ಬಳಸಿ ಮಾದಕ ವಸ್ತು ಖರೀದಿ ಮಾಡಿದ್ದ ಬಗ್ಗೆ ಸಿಕ್ಕ ಸಾಕ್ಷ್ಯಗಳನ್ನು ಆಧರಿಸಿ ಎನ್‍ಸಿಬಿ ಈ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ

ಆರ್ಯನ್ ಜೊತೆ ಸಿಕ್ಕಿಬಿದ್ದ ಅರ್ಬಾಜ್ ಮರ್ಚೆಂಟ್ ತಂದೆ ಅಸ್ಲಾಂ ಮಾತನಾಡಿ, ನನ್ನ ಮಗ ಅಮಾಯಕ. ಡ್ರಗ್ಸ್‌ಗೆ ಸಂಬಂಧಿಸಿದ ವಾಟ್ಸಪ್ ಚಾಟ್ ಇತ್ತು ಎನ್ನುವುದೆಲ್ಲಾ ಸುಳ್ಳು ಎಂದಿದ್ದಾರೆ. ಕ್ರ್ಯೂಸ್ ಮಾಲಿಕನಿಗೆ ಎರಡನೇ ಬಾರಿ ಎನ್‍ಸಿಬಿ ಸಮನ್ಸ್ ಜಾರಿ ಮಾಡಿದೆ.

ಈ ಪ್ರಕರಣ ಬಯಲಿಗೆ ಎಳೆದಿದ್ದು ಎನ್‍ಸಿಬಿ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ಕೇವಲ 2 ವರ್ಷಗಳ ಅವಧಿಯಲ್ಲಿ 17ಸಾವಿರ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

Share This Article
Leave a Comment

Leave a Reply

Your email address will not be published. Required fields are marked *