ಮಗಳ ಬಾಯ್‌ಫ್ರೆಂಡ್‌ಗೆ ಶಾರುಖ್ ಖಾನ್ ಧಮ್ಕಿ: ಅಷ್ಟಕ್ಕೂ ಅಸಲಿ ವಿಚಾರವೇನು?

Public TV
1 Min Read

ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ವಿಚಾರದಲ್ಲಿ ಫುಲ್ ಗರಂ ಆಗಿದ್ದಾರೆ. ತನ್ನ ಪುತ್ರಿಯ ಬಾಯ್‌ಫ್ರೆಂಡ್ ಅಗುವವನಿಗೆ 7 ಷರತ್ತಗಳನ್ನು ವಿಧಿಸಿದ್ದಾರೆ. ತನ್ನ ಮಗಳಿಗೆ ಕಿಸ್ ಮಾಡಿದ್ರೆ ಆತನ ತುಟಿ ಕತ್ತರಿಸುತ್ತೇನೆ ಎಂದಿದ್ದಾರೆ.

ಬಿಟೌನ್ ಸೂಪರ್ ಸ್ಟಾರ್ ತನ್ನ ಮಗಳ ವಿಚಾರದಲ್ಲಿ ಸಖತ್ ಕಟ್ಟುನಿಟ್ಟು. ಮಗಳ ಭವಿಷ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಆಕೆಯ ಜೀವನದ ಕುರಿತು ಕನಸು ಕಾಣುತ್ತಾರಂತೆ ಹಾಗಂತ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪುತ್ರಿಯ ಬಾಯ್ ಪ್ರೇಂಡ್‌ಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಇತ್ತೀಚೆಗೆ ಮೇ 22ರಂದು ಸುಹಾನಾ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಶಾರುಖ್ ಖಾನ್, ನನ್ನ ಮಗಳ ಬಾಯ್‌ಫ್ರೆಂಡ್ ಆಗುವವನು 7 ಷರತ್ತುಗಳನ್ನು ಪಾಲಿಸಲೇಬೇಕು. ಒಳ್ಳೆಯ ಕೆಲಸ ಮಾಡಬೇಕು, ಮಗಳ ಜೊತೆ ಸದಾ ಇರಬೇಕು, ಇನ್ನೂ ಒಬ್ಬ ವಕೀಲನನ್ನು ಇಟ್ಟಕೊಳ್ಳಬೇಕು, ಆಕೆಯ ಏನಾದ್ರು ಅನಾಹುತ ಆದರೆ ಅದೇ ರೀತಿ ಆತನಿಗೂ ಆಗುತ್ತದೆ ಎಂದು ಶಾರುಖ್ ಖಡಕ್ ಷರತ್ತುಗಳನ್ನೇ ಹಾಕಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರದಿಂದ ಹೊರ ನಡೆದ ತಂಗಿಯ ಪತಿ ಆಯುಷ್‌

ಇನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಕಮ್ ನಿರೂಪಕ ಕರಣ್ ಜೋಹರ್, ಶಾರುಖ್‌ಗೆ ನಿಮ್ಮ ಮಗಳಿಗೆ ಯಾರಾದರೂ ಕಿಸ್ ಮಾಡಿದ್ರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಕಿಸ್ ಮಾಡಿದ್ರೆ ಆತನ ತುಟಿಯನ್ನೇ ಕತ್ತರಿಸುತ್ತೇನೆ ಅಂತಾ ಶಾರುಖ್ ನೇರವಾಗಿ ಹೇಳಿದ್ದರು. ಒಟ್ನಲ್ಲಿ ಶಾರುಖ್ ಖಾನ್ ತಮ್ಮ ಮುದ್ದಿನ ಮಗಳ ವಿಚಾರದಲ್ಲಿ ತಾವೆಷ್ಟು ಖಡಕ್ ಎಂಬುದನ್ನ ತಮ್ಮ ಉತ್ತರದ ಮೂಲಕ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *