ಈಜಿಪ್ಟ್ ಅಭಿಮಾನಿಗೆ ಕೈಬರಹದಲ್ಲಿ ಟಿಪ್ಪಣಿ ಬರೆದು ಸಹಿ ಮಾಡಿ ಕಳುಹಿಸಿದ ಶಾರೂಖ್

Public TV
2 Min Read

ಮುಂಬೈ: ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಭಾರತೀಯರಿಗೆ ಸಹಾಯ ಮಾಡಿದ್ರು ಎಂದು ಈಜಿಪ್ಟ್ ಅಭಿಮಾನಿಗೆ ತನ್ನ ಕೈಬರಹದಲ್ಲಿ ಟಿಪ್ಪಣಿ ಬರೆದು ಸಹಿ ಮಾಡಿ ಫೋಟೋ ಜೊತೆಗೆ ಕಳುಹಿಸಿ ಕೊಟ್ಟಿದ್ದಾರೆ.

ಶಾರೂಖ್ ಬಾಲಿವುಡ್ ನಲ್ಲಿ ಯಶಸ್ವಿ ನಟ. ಅವರ ಅಭಿಮಾನಿ ಬಳಗ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಇದ್ದಾರೆ. ಅವರ ಅಭಿಮಾನಿಗಳ ಆಸೆಗಳನ್ನು ಈಡೇರಿಸಲು ಶಾರೂಖ್ ಪ್ರಯತ್ನಿಸುತ್ತಾ ಇರುತ್ತಾರೆ. ಇದೇ ರೀತಿ ಕಳೆದ ವರ್ಷ ಭಾರತೀಯ ಪ್ರಾಧ್ಯಾಪಕರಿಗೆ ಸಹಾಯ ಮಾಡಿದ ಈಜಿಪ್ಟ್ ಅಭಿಮಾನಿಗೆ ಹೃದಯಸ್ಪರ್ಶಿಯಾಗಿ ತಮ್ಮ ಕೈಬರಹದಲ್ಲಿ ಟಿಪ್ಪಣಿಯನ್ನು ಬರೆದು ಕಳುಹಿಸಿದ್ದಾರೆ. ಈ ಮೂಲಕ ಶಾರೂಖ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಮಲೈಕಾ ಖಡಕ್ ಉತ್ತರ

ಶಾರೂಖ್ ಕೇವಲ ಟಿಪ್ಪಣಿಯನ್ನು ಕಳುಹಿಸಲಿಲ್ಲ. ಅದರ ಜೊತೆಗೆ ಈಜಿಪ್ಟಿನ ಟ್ರಾವೆಲ್ ಏಜೆಂಟ್, ಅವರ ಮಗಳು ಮತ್ತು ಪ್ರೊಫೆಸರ್ ಮಗಳು ಸೇರಿ ಮೂರು ಹಸ್ತಾಕ್ಷರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಶೋಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಅಶ್ವಿನಿ ದೇಶಪಾಂಡೆ ಟ್ವಿಟ್ಟರ್ ನಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ, ಕಥೆಗೆ ಬಹಳ ಸಂತೋಷದ ಅಂತ್ಯ. ಎಸ್‍ಆರ್‍ಕೆ ಅವರು ಸಹಿ ಮಾಡಿದ 3 ಫೋಟೋಗಳು ಬಂದಿವೆ. ಈಜಿಪ್ಟಿನ ಟ್ರಾವೆಲ್ ಏಜೆಂಟ್‍ಗೆ ಸಂದೇಶದಲ್ಲಿ, ಒಂದು ಅವರ ಮಗಳಿಗೆ ಮತ್ತು ಇನ್ನೊಂದು ನನ್ನ ಮಗಳ ಸಹಿ ಇದೆ ಎಂದು ಬರೆದಿದ್ದಾರೆ.

ಏನಿದು?
ಈ ಹಿಂದೆ ಟ್ವೀಟ್‍ನಲ್ಲಿ ಅಶ್ವಿನಿ ಅವರಿಗೆ ಈಜಿಪ್ಟ್‍ನಲ್ಲಿರುವ ಟ್ರಾವೆಲ್ ಏಜೆಂಟ್ ಸಹಾಯ ಮಾಡಿದ್ದು, ಆತನಿಗೆ ಹಣ ಕೊಂಡಬೇಕಾಗಿತ್ತು. ಆದರೆ ಅಲ್ಲಿ ನಮಗೆ ಹಣವನ್ನು ಕಳುಹಿಸುವುದು ಕಷ್ಟವಾಗಿತ್ತು. ಆಗ ಈಜಿಪ್ಟ್ ನ ಟ್ರಾವೆಲ್ ಏಜೆಂಟ್ ‘ನೀವು ಶಾರೂಖ್ ಖಾನ್ ದೇಶದವರು. ನಾನು ನಿಮ್ಮನ್ನು ನಂಬುವೆ. ನಾನು ಟಿಕೆಟ್ ಬುಕ್ಕಿಂಗ್ ಮಾಡುತ್ತೇನೆ. ನೀವು ನನಗೆ ನಂತರ ಹಣವನ್ನು ಪಾವತಿಸಿ. ನಾನು ಈ ರೀತಿ ಮಾಡುವುದಿಲ್ಲ. ಆದರೆ ನೀವು ಶಾರೂಖ್ ದೇಶದವರು ಎಂದು ಈ ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ ಎಂದು ಕಥೆಯ ರೂಪದಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  1 ನಿಮಿಷದಲ್ಲಿ 105 ಪುಶ್-ಅಪ್ ಮಾಡಿ ದಾಖಲೆ ಸೃಷ್ಟಿಸಿದ ಯುವಕ!

ಈ ವೇಳೆ ಶಾರೂಖ್ ಅವರಿಗೆ ತಮ್ಮ ಅಭಿಮಾನಿ ಬಗ್ಗೆ ತಿಳಿಸಿದ್ದು ಈಗ ಶಾರೂಖ್ ಅಭಿಮಾನಿಗಾಗಿ ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ. ಶಾರೂಖ್ ಬೆಳ್ಳಿತೆರೆ ಮೇಲೆ ಕೊನೆಯ ಬಾರಿಗೆ 2018 ರ ‘ಝೀರೋ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ನಟ ಅಧಿಕೃತವಾಗಿ ಯಾವುದೇ ಸಿನಿಮಾವನ್ನು ಘೋಷಿಸದಿದ್ದರೂ, ಮೂರು ದೊಡ್ಡ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *