ಯಾವಾಗ ಶುರುವಾಗಲಿದೆ ಶಾರುಖ್ ಖಾನ್, ಸುಹಾನಾ ನಟನೆಯ ಸಿನಿಮಾ?

Public TV
1 Min Read

‘ಪಠಾಣ್’ (Paathan) ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಮಗಳ ಜೊತೆ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಅಪ್ಪ-ಮಗಳನ್ನ ಕಣ್ತುಂಬಿಕೊಳ್ಳುವ ಭಾಗ್ಯ ಫ್ಯಾನ್ಸ್‌ಗೆ ಸಿಗಲಿದೆ. ಶಾರುಖ್ ಮತ್ತು ಸುಹಾನಾ (Suhana Khan) ಖಾನ್ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬುದು ಹಳೆಯ ವಿಚಾರ. ಆದರೆ ಈ ಸಿನಿಮಾ ಯಾವಾಗ ಶುರುವಾಗುತ್ತೆ? ಇಬ್ಬರ ಪಾತ್ರ ಹೇಗಿದೆ? ಎಂಬುದರ ಮಾಹಿತಿ ಇಲ್ಲಿದೆ.

‘ಪಠಾಣ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆದ್ಮೇಲೆ ಮತ್ತೊಂದು ಬಿಗ್ ಆಫರ್ ಅನ್ನು ಸುಹಾನಾ ಬಾಚಿಕೊಂಡಿದ್ದಾರೆ. ಸದ್ಯ ಶಾರುಖ್‌- ಸುಹಾನಾ ನಟನೆಯ ಈ ಚಿತ್ರಕ್ಕೆ ‘ಕಿಂಗ್’ (King) ಎಂದು ಟೈಟಲ್‌ ಫೈನಲ್‌ ಮಾಡಿದ್ದಾರೆ.

‘ಕಿಂಗ್’ ಆ್ಯಕ್ಷನ್ ಕುರಿತ ಸಿನಿಮಾ ಆಗಿರೋದ್ರಿಂದ ಸುಹಾನಾಗೆ ಪಾತ್ರಕ್ಕೆ ತಕ್ಕಂತೆ ಟ್ರೈನಿಂಗ್ ಕೊಡಲಾಗುತ್ತಿದೆ. ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ನಟಿ ಸಖತ್ ಕಸರತ್ತು ಮಾಡ್ತಿದ್ದಾರೆ. ಶಾರುಖ್ ಮತ್ತು ಸುಹಾನಾ ಇಬ್ಬರ ಪಾತ್ರ ಕೂಡ ವಿಭಿನ್ನವಾಗಿದೆ. ಈ ಸಿನಿಮಾಗೆ ಸುಜೋಯ್ ಘೋಷ್ ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಪ್ರಥಮ್ ನಟಿಸಿ, ನಿರ್ದೇಶಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಟೀಸರ್ ಬಿಡುಗಡೆ

ಮಗಳ ಸಿನಿಮಾಗೆ ತಂದೆಯೇ ಸಾಥ್ ನೀಡ್ತಿದ್ದಾರೆ. ‘ಪಠಾಣ್’ ಸಿನಿಮಾ ಸಕ್ಸಸ್ ಆದ್ಮೇಲೆ ಶಾರುಖ್ ಖಾನ್‌ಗೆ ಹೆಚ್ಚಿನ ಬೇಡಿಕೆಯಿದೆ. ತನ್ನ ಹಾಗೆಯೇ ಮಗಳು ಕೂಡ ಸಕ್ಸಸ್ ಫುಲ್ ಕಲಾವಿದೆಯಾಗಿ ಮಿಂಚಬೇಕು ಎಂದು ಕಿಂಗ್ ಖಾನ್ ಆಸೆ. ಹಾಗಾಗಿ ಮಗಳಿಗೆ ಎಲ್ಲಾ ರೀತಿಯ ಟ್ರೈನಿಂಗ್ ಕೊಟ್ಟು ಕ್ಯಾಮೆರಾ ಮುಂದೆ ನಿಲ್ಲಿಸಲು ಶಾರುಖ್ ನಿರ್ಧರಿಸಿದ್ದಾರೆ.

ಈ ವರ್ಷ ಮೇ ಅಂತ್ಯದಲ್ಲಿ ‘ಕಿಂಗ್’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ರೆಡ್ ಚಿಲ್ಲೀಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಚಿತ್ರದ ನಿರ್ಮಾಣಕ್ಕೆ ‘ಪಠಾಣ್’ ಡೈರೆಕ್ಟರ್ ಸಿದ್ಧಾರ್ಥ್ ಆನಂದ್ ಸಾಥ್ ನೀಡುತ್ತಿದ್ದಾರೆ.

Share This Article