ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ (Shah Rukh Khan) ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ಆಡುತ್ತಿದ್ದರು. ಒಬ್ಬರನ್ನ ಕಂಡರೆ ಒಬ್ಬರು ಮುಖ ತಿರುಗಿಸಿಕೊಂಡು ಓಡಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಒಬ್ಬರ ಸಿನಿಮಾದಲ್ಲಿ ಒಬ್ಬರು ನಟಿಸೋದು, ಸಾರ್ವಜನಿಕ ಕಾರ್ಯಕ್ರಮದ ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳೋದು ಕಂಡುಬರುತ್ತಿದೆ. ಇದೆಲ್ಲ ನೋಡಿದ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ.
ಇದೀಗ ಅಬುಧಾಬಿಯ (Abu Dhabi) ಸುಂದರ ಸ್ಥಳಗಳಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಒಟ್ಟೊಟ್ಟಿಗೆ ಪ್ರಯಾಣಿಸಿದ್ದಾರೆ. ಜೊತೆಗೆ ಒಟ್ಟಿಗೆ ನಿಂತು ಪೋಸ್ ಕೊಟ್ಟಿದ್ದಾರೆ. ಹೌದು ಅಬುಧಾಬಿಯ ನೈಸರ್ಗಿಕ ವಸ್ತುಸಂಗ್ರಾಲಯದಲ್ಲಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಸೌದಿ ಅರೇಬಿಯಾದ ಜಾಯ್ ಪೋರಂನಲ್ಲಿ ಬಾಲಿವುಡ್‌ನ ದಿಗ್ಗಜ ನಟರು ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅಕ್ಕ ಪಕ್ಕದಲ್ಲಿ ನಿಂತಿದ್ದಾರೆ. ಈ ಸ್ಟಾರ್ ನಟರು ಒಟ್ಟೊಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ನೋಡಿ ಅವರ ಅಭಿಮಾನಿಗಳು ಮತ್ತಷ್ಟು ಖುಷಿಪಟ್ಟು ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಯಾವಾಗ ಎನ್ನುತ್ತಿದ್ದಾರೆ.

