ಗದಗ: ಮುದ್ರಣ ಕಾಶಿಗೂ ಯುದ್ಧದ (Iran War) ಕರಿನೆರಳು ಛಾಯೆ ಆವರಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ (Petroleum Products) ಬೆಲೆ ಏರಿಕೆಯಿಂದ ಪ್ರಿಂಟರ್ ಮತ್ತು ಪಬ್ಲಿಷರ್ಸ್ ತಲ್ಲಣಗೊಂಡಿದ್ದಾರೆ.
ಜಿಲ್ಲೆಯಲ್ಲಿ ನೂರಾರು ಪ್ರಿಂಟಿಂಗ್ ಪ್ರೆಸ್ಗಳಿವೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದಿಂದ ಹಲವು ಉದ್ಯಮಗಳಂತೆ ಮುದ್ರಣಕಾಶಿಯ ಮೇಲೂ ಪರಿಣಾಮ ಬೀರಿದೆ. ಪ್ರಿಂಟಿಂಗ್ ಪ್ರೆಸ್ಗಳಿಗೆ (Printing Press) ಬೇಕಾದ ಕಾಗದಗಳು, ಇಂಕ್, ಪ್ಲೇಟ್ ಸೇರಿದಂತೆ ಅನೇಕ ಪೆಟ್ರೋಲಿಯಂ ಪ್ರೊಡೆಕ್ಟ್ ಗಳ ಬೆಲೆ ಏರಿಕೆಯಾಗಿದೆ.
ಮುದ್ರಣ ಕಚ್ಚಾ ವಸ್ತುಗಳಿಗೆ ಶೇ.18 ರಷ್ಟು ಸರ್ಕಾರ ಜಿಎಸ್ಟಿ (GST) ವಿಧಿಸಿದೆ. ಟ್ಯಾಕ್ಸ್ ಹೊಡೆತದಿಂದ ಚೇತರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಯುದ್ಧದ ಎಫೆಕ್ಟ್ನಿಂದಾಗಿ ಕಚ್ಚಾ ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಇದು ಮುದ್ರಕರು ಹಾಗೂ ಪ್ರಕಾಶಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎನ್ನುತ್ತಿದ್ದಾರೆ ಮುದ್ರಕರು. ಇದನ್ನೂ ಓದಿ: ಕೈಗಾರಿಕೆಗಳಿಗೆ ರಿಲೀಫ್ – 40 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ
ಒಂದು ಕ್ವಿಂಟಾಲ್ ಕಾಗದಕ್ಕೆ 8 ರಿಂದ 10 ಸಾವಿರ ಹೆಚ್ಚಳವಾಗಿದೆ. ಮುಂಗಡ ಬುಕ್ಕಿಂಗ್ ಮಾಡಿದರೂ ಸಾಮಾಗ್ರಿಗಳ ವಿತರಣೆಯಾಗುತ್ತಿಲ್ಲ.ಪಂಚಾಂಗ, ಕ್ಯಾಲೆಂಡರ್, ಪಠ್ಯಪುಸ್ತಕ ಪ್ರಿಂಟ್ ಮಾಡುವ ಪ್ರಿಂಟರ್ಸ್ ಗೆ ಬೆಲೆ ಏರಿಕೆ ಅನಿವಾರ್ಯವಾಗಿದೆ.
ಈಗ ಶೇ. 20 ರಿಂದ ಶೇ. 40ರ ವರೆಗೆ ವಿವಿಧ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಸರ್ಕಾರ ಮುದ್ರಕರ, ಪ್ರಕಾಶಕರ ಅಳಲು ಕೇಳಬೇಕು. ಟ್ಯಾಕ್ಸ್ ಕಡಿಮೆ ಮಾಡಿದಲ್ಲಿ ಮುದ್ರಣ ಉದ್ಯಮ ಉಳಿಯುತ್ತೆ. ಇಲ್ಲವಾದರೆ ಮುದ್ರಣ ಉದ್ಯಮ ಬಂದ್ ಆಗಬಹುದು ಎಂದು ಮುದ್ರಣ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ವಿನಿತ್ ಕುಮಾರ್ ಹೇಳಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಿಂದಲೇ ಆಮದಾಗುವ ಮುದ್ರಣ ಕಚ್ಚಾವಸ್ತುಗಳು ಆಮದಾಗುತ್ತಿಲ್ಲ. ಕೃತಕ ಅಭಾವ ಸೃಷ್ಟಿ ಮಾಡಿ ಬೆಲೆ ಏರಿಕೆ ಮಾಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಕೆಲಸ ಕಡಿಮೆ ಆಗಿದ್ದು ಮೊದಲು ದಿನವೂ ಕೆಲಸ ಇತ್ತು, ಈಗ ವಾರಕ್ಕೆ ಕೆಲವೇ ದಿನ ಕೆಲಸ ಸಿಗುತ್ತಿದೆ. ಕೂಲಿ ಕಾರ್ಮಿಕರು ದುಡಿಮೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.


