ಲೈಂಗಿಕ ಕಿರುಕುಳ ಆರೋಪ – ಖಾಸಗಿ ಕಾಲೇಜಿನ ಪ್ರಾಂಶುಪಾಲ, ಪಾದ್ರಿ ಬಂಧನ

Public TV
1 Min Read

ಶಿವಮೊಗ್ಗ : ಅಪ್ರಾಪ್ತ ಹುಡುಗಿಗೆ (Minor) ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚರ್ಚ್‌ ಪಾದ್ರಿಯೂ ಆಗಿರುವ ಖಾಸಗಿ ಕಾಲೇಜಿನ ಪ್ರಾಂಶುಪಾಲನನ್ನು (Principal) ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

ಬಂಧಿತ ಪ್ರಾಂಶುಪಾಲ ಹಾಗೂ ಚರ್ಚ್ ಪಾದ್ರಿಯನ್ನು ಫ್ರಾನ್ಸಿಸ್ ಫರ್ನಾಂಡೀಸ್ ಎಂದು ಗುರುತಿಸಲಾಗಿದೆ. ಫ್ರಾನ್ಸಿಸ್ ಫರ್ನಾಂಡೀಸ್ ಹಲವು ವರ್ಷಗಳಿಂದ ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದ. ಆದರೆ ಯಾರೂ ಈತನ ವಿರುದ್ಧ ಧ್ವನಿ ಎತ್ತಿರಲಿಲ್ಲ ಎಂದು ಅಪ್ರಾಪ್ತ ಹುಡುಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಜೈನಮುನಿಗಳ ಹತ್ಯೆ ಪ್ರಕರಣ – ಸ್ವಾಮೀಜಿ ಪರ್ಸನಲ್ ಡೈರಿ ಪತ್ತೆ

ಅಪ್ರಾಪ್ತ ಹುಡುಗಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್‌ನಲ್ಲಿದ್ದಳು. ಹುಡುಗಿಯ ಬಡತನವನ್ನ ದುರುಪಯೋಗ ಪಡಿಸಿಕೊಂಡ ಪ್ರಾಂಶುಪಾಲ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಸುವ ನಾಟಕವಾಡಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಹುಡುಗಿ ಇದೀಗ ತನ್ನ ಕೈ ಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದನ್ನೂ ಓದಿ: ಶಂಕಿತ ಉಗ್ರರು ಬೆಂಗ್ಳೂರಲ್ಲೇ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳು ಪತ್ತೆ

ಹುಡುಗಿ ಆಸ್ಪತ್ರೆಗೆ ದಾಖಲಾದ ಬಳಿಕ ಪ್ರಾಂಶುಪಾಲನ ವ್ಯಾಘ್ರ ಮುಖ ಕಳಚಿ ಬಿದ್ದಿದೆ. ಘಟನೆ ಕುರಿತು ಸಂತ್ರಸ್ತೆ ಪೋಷಕರು ಪ್ರಾಂಶುಪಾಲ ಹಾಗೂ ಪಾದ್ರಿ ಫ್ರಾನ್ಸಿಸ್ ಫರ್ನಾಂಡೀಸ್ ವಿರುದ್ಧ ಶಿವಮೊಗ್ಗದ ಕೋಟೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರ ಬಳಿಯಿದ್ದ ವಾಕಿಟಾಕಿ ಸುತ್ತ ಅನುಮಾನ – ವಿದೇಶದಲ್ಲಿದ್ದುಕೊಂಡೇ ಲಕ್ಷ ಲಕ್ಷ ಫಂಡಿಂಗ್ ಮಾಡ್ತಿದ್ದ ಮಾಸ್ಟರ್ ಮೈಂಡ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್