ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಿಗ್‌ ರಿಲೀಫ್‌; ಹೆಚ್‌.ಡಿ ರೇವಣ್ಣ ವಿರುದ್ಧದ ಪ್ರಕರಣ ಕೈಬಿಟ್ಟ ಕೋರ್ಟ್

1 Min Read

ಬೆಂಗಳೂರು: ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ (HD Revanna) ಬಿಗ್‌ ರಿಲೀಫ್‌ ಸಿಕ್ಕಿದೆ. ರೇವಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ಬೆಂಗಳೂರಿನ ಕೋರ್ಟ್‌ (Bengaluru Court) ಕೈಬಿಟ್ಟಿದೆ.

ಹೌದು. ಹೆಚ್‌.ಡಿ ರೇವಣ್ಣನನ್ನ ಆರೋಪ ಮುಕ್ತಗೊಳಿಸಿ 42ನೇ ಎಸಿಜೆಎಂ ಕೋರ್ಟ್‌ ಇಂದು ಆದೇಶ ಹೊರಡಿಸಿದೆ. ವಿಳಂಬವಾಗಿ ದೂರು ದಾಖಲಿಸಲಾಗಿದೆ ಎಂದು ಕಾರಣ ನೀಡಿ ಕೋರ್ಟ್ ಪ್ರಕರಣ ರದ್ದುಗೊಳಿಸಿದೆ. ಇದನ್ನೂ ಓದಿ: ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್‌ – ರೇವಣ್ಣ, ಭವಾನಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಸಂತ್ರಸ್ತೆ ಆರೋಪ ಏನಿತ್ತು?
ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸಿ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಮನೆಯ ಸ್ಟೋರ್ ರೂಮಿನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆಯನ್ನು ಮುಟ್ಟುತ್ತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆ ಪೊಲೀಸರಿಗೆ ಹೊಳೇನರಸಿಪುರ ಠಾಣೆಗೆ 2024ರ ಏಪ್ರಿಲ್‌ನಲ್ಲಿ ದೂರು ನೀಡಿದ್ದರು.

ಮಹಿಳೆಯ ದೂರಿನ ಅನ್ವಯ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ದ ಐಪಿಸಿ ಸೆಕ್ಷನ್‌ 354 ಎ ಅಡಿಯಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಇದರ ತನಿಖೆ ನಡೆಸಿದ್ದರು. ಈ ಮಧ್ಯೆ ಪ್ರಕರಣದಿಂದ ತಮ್ಮನ್ನ ಕೈಬಿಡುವಂತೆ ಕೋರಿ ರೇವಣ್ಣ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?

ವಾದ – ಪ್ರತಿವಾದಗಳನ್ನು ಪರಿಶೀಲಿಸಿದ್ದ ಕೋರ್ಟ್‌ ವಿಳಂಬವಾಗಿ ದೂರು ದಾಖಲಿಸಲಾಗಿದೆ. ಜೊತೆಗೆ ಪ್ರಕರಣದ ವಿಚಾರಣೆಯೂ ಕೂಡ ತಡವಾಗಿದೆ ಎಂಬ ಕಾರಣ ನೀಡಿ ರೇವಣ್ಣರನ್ನ ಪ್ರಕರಣದಿಂದ ಕೈಬಿಟ್ಟಿದೆ. ಇದನ್ನೂ ಓದಿ: ಪ್ರಜ್ವಲ್‌ ಕೇಸ್‌ – ಜಡ್ಜ್‌ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್​ಪಿಸಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?

Share This Article