ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

Public TV
1 Min Read

– ಕಾದು ಕಾದು ಹೈರಾಣಾದ ಜನ

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ (Gruhajyothi Scheme)ನೋಂದಣಿ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದ್ದು, 5ನೇ ದಿನವೂ ಸರ್ವರ್‌ ಸಮಸ್ಯೆ (Server Down Problem) ಎದುರಿಸುವಂತಾಗಿದೆ.

5ನೇ ದಿನವಾದ ಗುರುವಾರವೂ ರಾಜಾಜೀನಗರದ 4ನೇ ಬ್ಲಾಕ್‌, ಮಲ್ಲೇಶ್ವರಂ ಕಾಡುಮಲ್ಲೇಶ್ವರ ವಾರ್ಡ್, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ವೃಷಭಾವತಿ ನಗರ ಹಾಗೂ ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧೆಡೆ ಬೆಂಗಳೂರು ಒನ್‌ (Bengaluru One) ಕೇಂದ್ರಗಳಲ್ಲಿ ಬೆಳ್ಳಂ ಬೆಳಗ್ಗೆ ಸರ್ವರ್‌ ಸಮಸ್ಯೆ ಕಂಡುಬಂದಿದೆ. ಇದರಿಂದ ಅರ್ಜಿ ಸಲ್ಲಿಸಲು ಕಾದು ನಿಂತ ಜನರು ಹಾಗೂ ಬೆಂಗಳೂರು ಒನ್‌ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

ಬೆಳಗ್ಗಿನ ಜಾವ 5 ಗಂಟೆಯಿಂದಲೇ ಬೆಂಗಳೂರು ಒನ್‌ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಒಂದು ಅರ್ಜಿ ಸಲ್ಲಿಕೆಗೆ 30 ನಿಮಿಷಗಳ ಸಮಯ ಬೇಕಾಗುತ್ತಿದೆ. ಆದ್ರೆ ಸರ್ವರ್‌ ಸಮಸ್ಯೆಯಿಂದಾಗಿ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಿಂದ ಪರಿಷತ್ ಮೂರು ಸ್ಥಾನಗಳಿಗೆ ಉಪಚುನಾಚಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ

ಅರ್ಜಿ ಸಲ್ಲಿಕೆ ಆರಂಭವಾದ ಮೊದಲ ದಿನವೇ ವಿವಿಧೆಡೆ ಸರ್ವರ್‌ ಸಮಸ್ಯೆಯ ಹೊರತಾಗಿಯೂ 1,61,958 ಗ್ರಾಹಕರು (ಸಂಜೆ 5 ಗಂಟೆವರೆಗೆ) ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.

Share This Article