ನೆಲಮಂಗಲದಲ್ಲಿ ಸರಣಿ ಅಫಘಾತ – ಅದೃಷ್ಟವಶಾತ್‌ ವಾಹನ ಸವಾರರು ಪಾರು

By
1 Min Read

– ಕೆಟ್ಟು ನಿಂತ ಲಾರಿ – ಭಾರೀ ಟ್ರಾಫಿಕ್‌ ಜಾಮ್‌

ನೆಲಮಂಗಲ: ಕಾರುಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ನೆಲಮಂಗಲದ  (Nelamangala) ಅರಿಶಿನಕುಂಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಟ್ರಾಫಿಕ್ ವೇಳೆ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಬೆಂಗಳೂರಿನ ಕಡೆ ತೆರಳುತ್ತಿದ್ದ 4 ಕಾರುಗಳ ನಡುವೆ ಅಪಘಾತವಾಗಿದೆ. ಸಂಜೆ ಸುಮಾರು 6:30ರ ವೇಳೆಗೆ ಘಟನೆ ನಡೆದಿದೆ. ಸದ್ಯ ಪ್ರಾಣಾಪಾಯದಿಂದ ಚಾಲಕರು ಮತ್ತು ಸವಾರರು ಪಾರಾಗಿದ್ದಾರೆ.

ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರೀ ಟ್ರಾಫಿಕ್‌ ಜಾಮ್‌
ನೆಲಮಂಗಲದಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂಜಿನ್ ಸಮಸ್ಯೆಯಿಂದ ಲಾರಿ ಹೆದ್ದಾರಿ ಮಧ್ಯೆ ಕೆಟ್ಟು ನಿಂತಿದ್ದರಿಂದ ದಾಸನಪುರದಿಂದ ನೆಲಮಂಗಲದವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಸುಮಾರು ಐದಾರು ಕಿಲೋಮೀಟರ್ ವಾಹನಗಳು ಸಾಲುಗಟ್ಟಿ ನಿಂತಿವೆ.

Share This Article