ಬಿಜೆಪಿಯಿಂದ ಸರಣಿ ಸಭೆ- ಸೋಲಿನ ಪರಾಮರ್ಶೆ ಮಾಡಲಿರುವ ನಾಯಕರು

Public TV
1 Min Read

ಬೆಂಗಳೂರು: ಇಂದು ರಾಜ್ಯ ಬಿಜೆಪಿ (BJP Meeting) ನಾಯಕರಿಂದ ಸರಣಿ ಸಭೆಗಳು ನಡೆಯುತ್ತಿವೆ. ಈ ಸಭೆಯಲ್ಲಿ ಸೋಲಿನ ಪರಾಮರ್ಶೆಯನ್ನು ಬಿಜೆಪಿ ನಾಯಕರು ನಡೆಸಲಿದ್ದಾರೆ.

ಮಧ್ಯಾಹ್ನ ಪರಾಜಿತ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಒಟ್ಟು 66 ಶಾಸಕರ ಜತೆ ಆತ್ಮಾವಲೋಕನ ಸಭೆಯನ್ನು ನಾಯಕರು ನಡೆಸಲಿದ್ದಾರೆ. ವಿಪಕ್ಷ ನಾಯಕರ ಆಯ್ಕೆ, ಪರಿಷತ್ ಚುನಾವಣೆ ಬಗ್ಗೆಯೂ ಮಹತ್ವದ ಚರ್ಚೆ ಹಾಗೂ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಹೋರಾಟ ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನು ಇಂದು ಸಂಜೆ 6.30ಕ್ಕೆ ನಿಗದಿಯಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಸಭೆಗಳ ಬಳಿಕ ಸೋಲಿನ ಆತ್ಮಾವಲೋಕನ, ಸೋಲಿನ ಕಾರಣಗಳ ಸಂಬಂಧ ಹೈಕಮಾಂಡ್ ಗೆ ಬಿಜೆಪಿ ರಾಜ್ಯ ಘಟಕ ವರದಿ ಕಳಿಸಲಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರ್. ಅಶೋಕ್ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಬೆನ್ನಲ್ಲೇ ಮತ್ತೊಂದು ದುರಂತ – ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು

Share This Article