ಲಕ್ನೋ: ಸರಣಿ ಮೊಬೈಲ್ ಫೋನ್ ಕದ್ದಿದ್ದ ಕಳ್ಳ ಪರಾರಿಯಾಗಲು ಯತ್ನಿಸಿದ್ದರಿಂದ ಆತನ ಕಾಲಿಗೆ ಎನ್‍ಕೌಂಟರ್ ವೇಳೆ ನೋಯ್ಡಾ ಪೊಲೀಸರು ಗುಂಡು ಹಾರಿಸಿದ್ದಾರೆ.
ಇದೀಗ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಬಳಿಯಿದ್ದ ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆತನ ಸಹಚರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಫರಿದಾಬಾದ್-ನೋಯ್ಡಾ-ಘಾಜಿಯಾಬಾದ್ ಎಕ್ಸ್ಪ್ರೆಸ್‍ವೇನಲ್ಲಿ (Faridabad-Noida-Ghaziabad Expressway) ತಪಾಸಣೆ ನಡೆಸುತ್ತಿದ್ದ ವೇಳೆ ಮೂರು ಸ್ಮಾರ್ಟ್‌ಫೋನ್‍ಗಳನ್ನು ಕದ್ದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಹೇಳಿದ್ದಾರೆ. ಇದನ್ನೂ ಓದಿ: ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ
ನೋಯ್ಡಾ ಸೆಕ್ಟರ್ (Noida) 113 ಪೊಲೀಸ್ ಠಾಣೆಯ ಅಧಿಕಾರಿಗಳು ತಡರಾತ್ರಿ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ವ್ಯಕ್ತಿ ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಆತನನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ಹಿನ್ನೆಲೆ ನಾವು ಆತನ ಮೇಲೆ ಫೈರಿಂಗ್ ನಡೆಸಿದೆವು. ಈ ವೇಳೆ ಆರೋಪಿ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.
ಈ ಸಂಬಂಧ ವಿಚಾರಣೆ ವೇಳೆ ಆರೋಪಿ ತಾವು ಮೊದಲ ಬಾರಿ ಮೊಬೈಲ್ ಫೋನ್ ಕದಿಯುತ್ತಿಲ್ಲ, ದೆಹಲಿ-ಎನ್‍ಸಿಆರ್‌ನಲ್ಲಿ ಬಹಳ ಸಮಯದಿಂದ ಕಳ್ಳತನ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆತನ ವಿರುದ್ಧ ದೆಹಲಿ-ಎನ್‍ಸಿಆರ್‌ನಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.