ನೆಲಮಂಗಲದಲ್ಲಿ ಸರಣಿ ಅಪಘಾತ – ಕಾರು ಲಾರಿಯ ಕೆಳಗೆ ಸಿಲುಕಿದ್ರೂ ಪವಾಡ ರೀತಿಯಲ್ಲಿ ಚಾಲಕ ಪಾರು

By
1 Min Read

ನೆಲಮಂಗಲ: ಬೆಳ್ಳಂಬೆಳಗ್ಗೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಬಳಿ ಭೀಕರ ಸರಣಿ ಅಪಘಾತ (Nelamangala Serial accident) ಸಂಭವಿಸಿದೆ. ಆದ್ರೆ ಕಾರು ಲಾರಿ ಕೆಳಗೆ ಸಿಲುಕಿ ನಜ್ಜುಗುಜ್ಜಾದರೂ ಪವಾಡ ರೀತಿಯಲ್ಲಿ ಚಾಲಕ ಪಾರಾಗಿದ್ದಾರೆ.

ಸ್ವಿಫ್ಟ್ ಕಾರು, ಲಾರಿ ಹಾಗೂ ಟೂರಿಸ್ಟ್ ಬಸ್ (Tourist Bus) ಮಧ್ಯೆ ಅಪಘಾತ ಸಂಭವಿಸಿದೆ. ಮೊದಲು ಚಲಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯೊಡೆದಿದೆ, ಕಾರಿಗೆ ಹಿಂಬದಿಯಿಂದ ಟೂರಿಸ್ಟ್‌ ಬಸ್ ಡಿಕ್ಕಿ ಹೊಡೆದಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ (Tumkur Bengaluru National Highway) ಅವೈಜ್ಞಾನಿಕ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

ಪವಾಡ ರೀತಿಯಲ್ಲಿ ಚಾಲಕ ಪಾರು
ಭೀಕರ ಅಪಘಾತದಲ್ಲಿ ತುಮಕೂರು ಜಿಲ್ಲೆಯ ಸೇಲ್ಸ್ ಟ್ಯಾಕ್ಸ್ ಕಚೇರಿಯ ಕಾರು ಚಾಲಕ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಬಚಾವ್‌ ಆಗಿದ್ದಾರೆ. ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೆಲಮಂಗಲದಲ್ಲಿಕಳೆದ ಒಂದು ತಿಂಗಳ ಹಿಂದೆಯಷ್ಟೇ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್‌ ಭಾವುಕ ಪೋಸ್ಟ್‌

Share This Article