ನೆಲಮಂಗಲ ಬಳಿ ಸರಣಿ ಅಪಘಾತ – ರೊಚ್ಚಿಗೆದ್ದ ಸವಾರರಿಂದ KSRTC ಚಾಲಕನಿಗೆ ಥಳಿತ

1 Min Read

ಬೆಂಗಳೂರು: ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಸರಣಿ ಅಪಘಾತ(Serial Accident) ಸಂಭವಿಸಿದ ಘಟನೆ ಇಂದು (ಮಾ.29) ಸಂಜೆ ನಡೆದಿದೆ.

ನೆಲಮಂಗಲ (Nelamangala) ತಾಲೂಕಿನ ಕೊರಟಗೆರೆ ಬಳಿ ಹಾಸನದಿಂದ ಬೆಂಗಳೂರಿಗೆ (Hassana-Bengaluru) ಬರುತ್ತಿದ್ದ ಕೆಎಸ್‌ಆರ್‌ಟಿಸಿ ಪುಷ್ಪಕ್‌ ಪ್ಲಸ್‌ ಇವಿ ಬಸ್‌ ಓವರ್ ಟೇಕ್ ಮಾಡಲು ಹೋಗಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ರೀಲ್ಸ್‌ನಲ್ಲಿ ಹವಾ ಮಾಡಿದ್ದ ʻಲಕ್ಷ್ಮಿ ಅಜ್ಜಿʼ ನಿಧನ

ಕಾರಿನ ಹಿಂಭಾಗ ನಜ್ಜುಗುಜ್ಜಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಗುದ್ದಿದ ನಂತರ ಉಳಿದ ವಾಹನ ಸವಾರರು ಬಸ್‌ ಚಾಲಕನನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಚಾಲಕ ಮತ್ತು ಉಳಿದ ವಾಹನಗಳ ಚಾಲಕರು, ಪ್ರಯಾಣಿಕರ ಮಧ್ಯೆ ಜೋರಾಗಿ ಜಗಳ ನಡೆದಿದೆ.ಜಾಸ್ತಿ ಜಗಳ ನಡೆಯುತ್ತಿದ್ದಂತೆ ಉಳಿದ ಸವಾರರು ಬಸ್‌ ಚಾಲಕನಿಗೆ ಥಳಿಸಿದ್ದಾರೆ. ಇದನ್ನೂ ಓದಿ: ನನ್ನ ಸ್ನೇಹಿತೆ ಜೊತೆಗೂ ಸೇರು.. ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿ

ಸಾಧಾರಣವಾಗಿ ಭಾನುವಾರ ಸಂಜೆ ಎಂದಿನಂತೆ ಊರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ಈ ಹೆದ್ದಾರಿಯಲ್ಲಿ ಜಾಸ್ತಿ ಇರುತ್ತದೆ. ಅಪಘಾತ ನಡೆದು ಚಾಲಕ ಮತ್ತು ಸವಾರರ ಮಧ್ಯೆ ಜಗಳ ನಡೆದ ಪರಿಣಾಮ ಕಿಲೋಮೀಟರ್‌ಗಟ್ಟಲ್ಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.
Share This Article