ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರಣಿ ಅಪಘಾತ – ಬಸ್ ಚಲಾಯಿಸುವಾಗಲೇ ಚಾಲಕನಿಗೆ ಮೂರ್ಛೆ

Public TV
2 Min Read

– ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ನಡೆದಿದ್ದ ಇವಿ ಬಸ್ (EV Bus) ಸರಣಿ ಅಪಘಾತದಲ್ಲಿ 9 ವಾಹನಗಳು ಜಖಂಗೊಂಡಿದ್ದವು. ಅಪಘಾತದ ಸಿಸಿಟಿವಿ ದೃಶ್ಯ ಬಿಡುಗಡೆಯಾಗಿದ್ದು, ಘಟನೆ ಬೆಚ್ಚಿ ಬೀಳಿಸುವಂತಿದೆ.

ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಿಎಂಟಿಸಿ ಇವಿ ಬಸ್‌ನಿಂದ ಸರಣಿ ಅಪಘಾತವೊಂದು ಸಂಭವಿಸಿತ್ತು. ಈ ಘಟನೆಗೆ ಚಾಲಕನ ಅನಾರೋಗ್ಯವೇ ಕಾರಣ ಅನ್ನೋದು ಗೊತ್ತಾಗಿದೆ. ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಮೂರ್ಛೆ ಬಂದ ಕಾರಣದಿಂದಲೇ ಈ ಅಪಘಾತ ಆಗಿರೋದು ಎಂಬುದು ಬಸ್ ಒಳಭಾಗದ ಸಿಸಿಟಿವಿ ಮೂಲಕ ಬಯಲಾಗಿದೆ. ಇದನ್ನೂ ಓದಿ: Bengaluru| ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸರಣಿ ಅಪಘಾತ – 9 ವಾಹನಗಳಿಗೆ ಇವಿ ಬಸ್ ಡಿಕ್ಕಿ

ಹೌದು, ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಇವಿ ಬಸ್ ಏಕಾಏಕಿ ನಿಂತಿದ್ದ 9 ವಾಹನಗಳನ್ನ ಗುದ್ದಿಕೊಂಡು ಹೋಗಿ ನಿಂತಿತ್ತು. ಘಟನೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದರು. ಬಳಿಕ ಘಟನೆ ಸಂಬಂಧ ಬಸ್ ಒಳಭಾಗದ ಸಿಸಿಟಿವಿ ಪರಿಶೀಲಿಸಿದಾಗ ಘಟನೆಗೆ ಕಾರಣ ಚಾಲಕನ ಅನಾರೋಗ್ಯ ಅನ್ನೋದು ತಿಳಿದು ಬಂದಿದೆ. ಇದನ್ನೂ ಓದಿ: ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ಸವಾಲ್

ಬಸ್ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಂದಾಗ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಪರಿಣಾಮ ಚಾಲಕ ಜೋರಾಗಿ ಬಸ್ ಎಕ್ಸಲೇಟರ್ ತುಳಿದಿದ್ದಾನೆ. ಇದರ ಪರಿಣಾಮ ಮುಂದೆ ಇದ್ದ ವಾಹನಗಳನ್ನ ಬಸ್ ಗುದ್ದಿಕೊಂಡು ಹೋಗಿದೆ. ಬಸ್ ಒಳಗೆ ನಿರ್ವಾಹಕ ಬಸ್ ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ 4 ಆಟೋ, 4 ಕಾರು 1 ಬೈಕ್ ಘಟನೆಯಲ್ಲಿ ನಜ್ಜುಗುಜ್ಜು ಆಗಿದ್ದು, ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ʻಏಯ್ ಕರಿ ಟೋಪಿ ಎಂಎಲ್‌ಎ ಬಾರಪ್ಪʼ – ಡಿಕೆಶಿ Vs ವರ್ಸಸ್ ಮುನಿರತ್ನ ನಡ್ವೆ ʻಕರಿ ಟೋಪಿʼ ಕದನ!

ಇನ್ನೂ ಘಟನೆ ಬಳಿಕ ಬಿಎಂಟಿಸಿ ಯಡವಟ್ಟು ಕೂಡ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಚಾಲಕರ ನೇಮಕ ವಿಚಾರದಲ್ಲಿ ಗುತ್ತಿಗೆ ಕಂಪನಿಗಳ ನಿರ್ಧಾರವೇ ಅಂತಿಮವಾಗಿದ್ದು, ಸಾರ್ವಜನಿಕ ಸಾರಿಗೆ ಚಾಲಕರ ನೇಮಕ ವಿಚಾರದಲ್ಲಿ ಜವಾಬ್ದಾರಿ ಮರೆಯಿತಾ ಬಿಎಂಟಿಸಿ ಅನ್ನೋ ಪ್ರಶ್ನೆಗಳು ಉದ್ಭವವಾಗಿವೆ. ಕಾರಣ ಗುತ್ತಿಗೆ ಕಂಪನಿಗಳು ನೇಮಿಸಿಕೊಳ್ಳುವ ಚಾಲಕರನ್ನ ನಂಬಿ, ಹಿನ್ನೆಲೆ ವಿಚಾರಿಸದೆ ರಸ್ತೆಗೆ ಬಸ್ ಇಳಿಸುತ್ತಿರುವ ಹಿನ್ನೆಲೆ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ ಅನ್ನೋ ಆರೋಪಗಳು ಕೂಡ ಕೇಳಿ ಬರುತ್ತಿವೆ. ಇದನ್ನೂ ಓದಿ: 2 ವರ್ಷದ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಸಿಕ್ಕಿದ್ದು ಅಸ್ಥಿಪಂಜರವಾಗಿ – ಧರಿಸಿದ್ದ ಟೀ-ಶರ್ಟ್, ಹಲ್ಲು ಸೆಟ್‌ನಿಂದ ಗುರುತು ಪತ್ತೆ

Share This Article