ಒಂದು ಬೈಕ್ ಐದು ಕಾರುಗಳ ನಡುವೆ ಭೀಕರ ಸರಣಿ ಅಪಘಾತ – ಪಾರಾದ ಸವಾರ

Public TV
1 Min Read

ನೆಲಮಂಗಲ: ಬೆಂಗಳೂರು-ತುಮಕೂರು (Bengaluru-Tumkakuru) ರಾಷ್ಟ್ರೀಯ ಹೆದ್ದಾರಿಯಲ್ಲಿ ಐದು ಕಾರು ಒಂದು ಬೈಕ್ ನಡುವೆ ಭೀಕರ ಸರಣಿ ಅಪಘಾತ (Serial Accident) ಸಂಭವಿಸಿದೆ.

ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಟಿ.ಬೇಗೂರು ಬಳಿಯ ಪೆಟ್ರೋಲ್‌ ಪಂಪ್‌ ಬಳಿ ಘಟನೆ ನಡೆದಿದ್ದು ಅದೃಷ್ಟವಶಾತ್‌ ಸವಾರ ಪಾರಾಗಿದ್ದಾನೆ. ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ ಬಿಕ್ಕಟ್ಟು: ಮಂಗಳವಾರ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ

 

ಬೈಕ್‌ ಸವಾರ ಬಲಕ್ಕೆ ಚಲಿಸುವ ವೇಳೆ ರಸ್ತೆ ಮಧ್ಯೆ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಸರಣಿ ಅಪಘಾತ ನಡೆದಿದೆ. ಬೈಕ್ ಸವಾರ ಹಾಗೂ ಕಾರಿನಲ್ಲಿದ್ದವರು ಪವಾಡ ರೀತಿಯಲ್ಲಿ ಸಣ್ಣಪುಟ್ಟ ಗಾಯದಿಂದ ಎಲ್ಲರೂ ಪಾರಾಗಿದ್ದಾರೆ. ಇದನ್ನೂ ಓದಿ: ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆಯಾಗಿದ್ದು ಬೈಕ್‌ ಸವಾರನ ನಿರ್ಲಕ್ಷ್ಯ ಎಸಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಅಪಘಾತದಿಂದ ತುಮಕೂರು ಬೆಂಗಳೂರು ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು.

Share This Article