ಮಾಜಿ ಬಂಟನಿಗೆ ಸೋಲಿನ ರುಚಿ ತೋರಿಸಲು ಮುಹೂರ್ತ ಫಿಕ್ಸ್ ಮಾಡಿದ ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಹೃದಯದಿಂದ ಹೊರಗಿಟ್ಟ ಮಾಜಿ ಬಂಟನಿಗೆ ಸೋಲಿನ ರುಚಿ ತೋರಿಸಲು ಗುರು ಮಾಜಿ ಸಿಎಂ ಸಿದ್ದರಾಮಯ್ಯರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಶಿಷ್ಯ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಚುನಾವಣೆ ರಣಕಹಳೆಯನ್ನು ಮೊಳಗಿಸಿದ್ದಾರೆ.

ಎಂಟಿಬಿ ನಾಗರಾಜ್ ವಿರುದ್ಧ ತೊಡೆತಟ್ಟಲು ವೇದಿಕೆ ಸಿದ್ಧಪಡಿಸಿಕೊಂಡಿರುವ ಸಿದ್ದರಾಮಯ್ಯನವರು ಸೆಪ್ಟೆಂಬರ್ 21ರಂದು ಹೊಸಕೋಟೆಯಲ್ಲಿ ಬಹಿರಂಗ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಎಂಟಿಬಿ ನಾಗರಾಜ್ ಸ್ವಕ್ಷೇತ್ರದಲ್ಲಿಯೇ ಬಹಿರಂಗ ಸಮಾವೇಶ ನಡೆಸಿ, ವಾಗ್ದಾಳಿ ನಡೆಸುವ ಸಾಧ್ಯತೆಗಳಿವೆ. ಈ ಮೂಲಕ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಇದನ್ನೂಓದಿ: ಕರ್ನಾಟಕದ ಶಾಸಕರು ಅತ್ಯಂತ ಶ್ರೀಮಂತರು- ಎಂಟಿಬಿ ನಾಗರಾಜ್ ದೇಶದಲ್ಲೇ ಶ್ರೀಮಂತ ಶಾಸಕ! ಯಾರ ಆದಾಯ ಎಷ್ಟು?

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ನನ್ನ ಹೃದಯಲ್ಲಿದ್ದಾರೆ ಎಂದು ಹೇಳಿದ್ದು ನಿಜ. ಆದ್ರೆ ಇಂದು ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಹೃದಯದಲ್ಲಿ ಕೇವಲ ಮತದಾರರು ಇದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅನರ್ಹ ಶಾಸಕರ ವಿರುದ್ಧದ ಮೊದಲ ರಣಕಹಳೆಯನ್ನು ಹೊಸಕೋಟೆಯಲ್ಲಿಯೇ ಮೊಳಗಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನದ ನೇತೃತ್ವವನ್ನ ಸಿದ್ದರಾಮಯ್ಯನವರು ವಹಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂಓದಿ: ಶಿಷ್ಯನ ವಿರುದ್ಧ ಸಿದ್ದರಾಮಯ್ಯ ರಣಕಹಳೆ- ಹೊಸಕೋಟೆಯಲ್ಲಿ ಹೊಸ ಅಭ್ಯರ್ಥಿಯನ್ನು ಹುಡುಕಿದ ಮಾಜಿ ಸಿಎಂ

Share This Article
Leave a Comment

Leave a Reply

Your email address will not be published. Required fields are marked *