30 ವರ್ಷದ ಕೇಸ್ ಓಪನ್ – ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್ ಅರೆಸ್ಟ್

Public TV
2 Min Read

ಶ್ರೀನಗರ: ದೇಶದ ಲಾಭವನ್ನು ಪಡೆಯುತ್ತಾ ಉಗ್ರರಿಗೆ ಸಹಕಾರ ನೀಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ ಎನ್ನುವ ಆಗ್ರಹದ ಬೆನ್ನಲ್ಲೇ ಸಿಬಿಐ 30 ವರ್ಷದ ಹಿಂದಿನ ಪ್ರಕರಣವನ್ನು ಮತ್ತೆ ಓಪನ್ ಮಾಡಿ ಜಮ್ಮು ಕಾಶ್ಮೀರದ ಪ್ರತ್ಯೇಕತವಾದಿ ನಾಯಕ, ಜಮ್ಮು ಕಾಶ್ಮೀರದ ಲಿಬರೇಷನ್ ಫ್ರಂಟ್ ಮುಖ್ಯಸ್ಥ, ಯಾಸಿನ್ ಮಲಿಕ್ ನನ್ನು ಬಂಧಿಸಿ ಜೈಲಿಗಟ್ಟಿದೆ.

ಫೆ.22 ರ ರಾತ್ರಿ ಮೈಸುಮಾ ಪ್ರದೇಶದ ಮನೆಯಿಂದ ಆತನನ್ನು ಬಂಧಿಸಿ ಕೊಥಿಬಾಗ್ ಪೊಲೀಸ್ ಠಾಣೆಯ ಜೈಲಿನಲ್ಲಿ ಇಡಲಾಗಿತ್ತು. ಸಾರ್ವಜನಿಕ ಸುರಕ್ಷತಾ ಕಾಯ್ದೆಯ (ಪಿಎಸ್‍ಎ) ಅಡಿ ಈ ಪ್ರಕರಣವನ್ನು ಸಿಬಿಐ ದಾಖಲಿಸಿದ್ದು, ಸದ್ಯ ಈತನನ್ನು ಕೋಟ್ ಬಲ್ವಾಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

https://twitter.com/ShobhaBJP/status/1103579632333275137

ಯಾಸಿನ್ ಮಲಿಕ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರಿ ಓಪನ್ ಮಾಡಲು ಸಿಬಿಐ ಜಮ್ಮು ಕಾಶ್ಮೀರ ಹೈಕೋರ್ಟ್ ನಲ್ಲಿ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಈ ಪ್ರಕರಣವನ್ನು ಜಮ್ಮುವಿನಿಂದ ಶ್ರೀನಗರಕ್ಕೆ ವರ್ಗಾಯಿಸಲು ಅನುಮತಿ ನೀಡುವಂತೆ ಕೇಳಿಕೊಂಡಿದೆ. ಜಮ್ಮು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಈ ಸಂಬಂಧ ಒಂದು ದಿನದಲ್ಲಿ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಮಲ್ಲಿಕ್ ಗೆ ಸೂಚಿಸಿದ್ದಾರೆ. ಮುಂದಿನ ಅರ್ಜಿ ವಿಚಾರಣೆ ಮಾರ್ಚ್ 11 ರಂದು ನಡೆಯಲಿದೆ.

ಏನಿದು ಪ್ರಕರಣ?
1990 ರಲ್ಲಿ ಐವರು ವಾಯುಸೇನೆಯ ಯೋಧರನ್ನು ಕಿಡ್ನಾಪ್ ಮಾಡಿ ಕೊಲೆಗೈದಿರುವ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ರುಬಿಯಾ ಸೈಯಾದ್ ಮಗಳನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಮುಖ ಯಾಸೀನ್ ಮಲ್ಲಿಕ್ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ನ್ಯಾ. ನೀಲಕಂಠ ಗಂಜು ಅವರ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಜಮ್ಮು ಕಾಶ್ಮೀರದ ಲಿಬರೇಷನ್ ಫ್ರಂಟ್ ಮುಖ್ಯಸ್ಥನಾಗಿದ್ದ ಮಾಕ್ಬುಲ್ ಭಟ್‍ಗೆ ನ್ಯಾ. ನೀಲಕಂಠ ಗಂಜು ಮರಣದಂಡನೆ ಶಿಕ್ಷೆ ವಿಧಿಸಿದ್ದರು. ಆತನನ್ನ 1984 ಫೆ.11 ರಂದು ನೇಣಿಗೇರಿಸಲಾಗಿತ್ತು.

ಫೆ.14ರ ಪುಲ್ವಾಮಾದ ಉಗ್ರರ ದಾಳಿಯ ಬಳಿಕಯಲ್ಲಿ 40 ಸಿಆರ್ ಪಿಎಫ್ ಯೋಧರ ಹುತ್ಮಾತರಾದ ಮರುದಿನವೇ ಸರ್ಕಾರ ಬಹುದೊಡ್ಡ ಸರ್ಚ್ ಆಪರೇಷನ್ ನಡೆಸಿ ಪ್ರತ್ಯೇಕವಾದಿಗಳನ್ನು ಬಂಧಿಸಿತ್ತು. ಅಲ್ಲದೇ ಫೆ.17 ರಂದು ಪ್ರತ್ಯೇಕವಾದಿಗಳಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು.

ಪುಲ್ವಾಮಾ ದಾಳಿಗೂ ಮುನ್ನ ದೇಶದಲ್ಲಿ ಇರುವ ಪ್ರತ್ಯೇಕವಾದಿಗಳು ಪಾಕಿಸ್ತಾನ ಹಾಗೂ ಐಸಿಸ್ ನಿಂದ ಹಣ ಸಂದಾಯ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಫೆ.26 ರಂದು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳು ಶ್ರೀನಗರ ಯಾಸಿನ್ ಮಲಿಕ್ ಮನೆಯ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿತ್ತು.

ಪಿಎಸ್‍ಎ ಕಾಯ್ದೆ ಏನು ಹೇಳುತ್ತೆ?
ಸಾರ್ವಜನಿಕರ ಸುರಕ್ಷತಾ ಕಾಯ್ದೆ(ಪಿಎಸ್‍ಎ) ಅಡಿ ಪ್ರಕರಣ ದಾಖಲಾದರೆ ಆ ವ್ಯಕ್ತಿಯನ್ನು 6 ತಿಂಗಳ ಕಾಲ ನ್ಯಾಯಾಲಯಕ್ಕೆ ಹಾಜರು ಪಡಿಸುವ ಅಗತ್ಯ ಇರುವುದಿಲ್ಲ. 2 ವರ್ಷಗಳ ಕಾಲ ನ್ಯಾಯಾಂಗ ಸಹ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *