ಸೆನ್ಸೆಕ್ಸ್‌, ನಿಫ್ಟಿ ಭರ್ಜರಿ ಏರಿಕೆ – ಹೂಡಿಕೆದಾರರ ಸಂಪತ್ತು ಒಂದೇ ದಿನ 6 ಲಕ್ಷ ಕೋಟಿ ವೃದ್ಧಿ

Public TV
1 Min Read

ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಮತ್ತೆ ಭಾರತದ ಮಾರುಕಟ್ಟೆಗೆ ಬರುತ್ತಿರುವ ಕಾರಣ ಭಾರತದ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಮತ್ತೆ ಏರಿಕೆ ಕಾಣಲು ಆರಂಭಿಸಿದೆ.

ಸೆನ್ಸೆಕ್ಸ್‌ ಇಂದು 1,078.88 ಅಂಕ ಏರಿಕೆಯಾಗಿ 77,984.38 ರಲ್ಲಿ ಮುಕ್ತಾಯವಾದರೆ ನಿಫ್ಟಿ 307.95 ಅಂಕ ಏರಿಕೆಯಾಗಿ 23,658.35 ರಲ್ಲಿ ಮುಕ್ತಾಯವಾಯಿತು. ಸಂವೇದಿ ಸೂಚ್ಯಂಕಗಳು ಏರಿಕೆಯಾಗಿದ್ದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6 ಲಕ್ಷ ಕೋಟಿ ಏರಿಕೆಯಾಗಿದೆ.

 

ಏರಿಕೆಗೆ ಕಾರಣ ಏನು?
ಕಳೆದ ವರ್ಷ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ತೆಗೆಯಲು ಆರಂಭಿಸಿದ್ದರು. ಆದರೆ ಈಗ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಮಾತುಕತೆ ನಡ್ವೆ ರಷ್ಯಾ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ 5 ವರ್ಷದ ಮಗು ಸೇರಿ 7 ಮಂದಿ ಸಾವು

ಮಾ. 18 ರಂದು 694 ಕೋಟಿ ರೂ., ಮಾ.20 ರಂದು 3,239 ಕೋಟಿ ರೂ., ಮಾ. 21 ರಂದು 7,470 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. 2023 ರಲ್ಲಿ 16,325 ಕೋಟಿ ರೂ. ಹಣವನ್ನು ತೆಗೆದಿದ್ದ ವಿದೇಶಿ ಹೂಡಿಕೆದಾರರು 2024 ರಲ್ಲಿ 3,04,217 ಕೋಟಿ ರೂ. ಹಿಂದಕ್ಕೆ ಪಡೆದಿದ್ದರು. ಇದರಿಂದ ಸೆನ್ಸೆಂಕ್ಸ್‌ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿತ್ತು. ಆದರೆ ಈಗ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮರಳಿ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಾಣಲು ಆರಂಭಿಸಿದೆ.

Share This Article