ಉಸ್ತುವಾರಿ ಸಚಿವರ ವಿರುದ್ಧವೇ ಸುದ್ದಿಗೋಷ್ಠಿ ನಡೆಸಿದ ಅಧಿಕಾರಿ

Public TV
2 Min Read

ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಕಾರಣ ಮೈಸೂರಿನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‍ಗೆ ವೇದಿಕೆಯಲ್ಲೇ ಸಚಿವ ವಿ.ಸೋಮಣ್ಣ ಮೊನ್ನೆ ಬೆವರಳಿಸಿದ್ದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು.

ಇದರ ಬೆನ್ನಲ್ಲೇ ಇಂದು ಉಸ್ತುವಾರಿ ಸಚಿವರ ವಿರುದ್ಧವೇ ಅಧಿಕಾರಿ ಸುರೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನಾನು ತಪ್ಪು ಮಾಡಿಲ್ಲ ನನ್ನ ಬಗ್ಗೆ ತಪ್ಪು ಮಾಹಿತಿ ಪಡೆದು ನೀವು ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದ್ದೀರಿ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಆರೋಪಿಸಿದ್ದಾರೆ.

ಸಚಿವರ ಬೈಗುಳದಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ದಾರಿಯಲ್ಲಿ ಓಡಾಡುವಾಗ ಜನ ನನ್ನನ್ನು ನೋಡುವಂತಾಗಿದೆ. ನನ್ನ ಮಗಳು, ಹೆಂಡತಿ ಎಲ್ಲರೂ ಕೆಲಸ ಬಿಟ್ಟುಬಿಡಿ ಅಂತಿದ್ದಾರೆ. ನಾನು ತಪ್ಪು ಮಾಡಿದ್ದರೆ ತನಿಖೆ ನಡೆಸಿ ಶಿಕ್ಷೆ ಕೊಡಿಸಲಿ. ಅದು ಬಿಟ್ಟು ಬಹಿರಂಗವಾಗಿ ನಿಂದಿಸಿ ಮರ್ಯಾದೆ ತೆಗೆಯೋದು ಎಷ್ಟು ಸರಿ. ಒಳ್ಳೆಯ ಕೆಲಸ ಮಾಡಿ ಎಂದು ಒಳ್ಳೆಯ ಭಾಷೆಯಲ್ಲಿ ಹೇಳಿ ಸರ್. ನೀವು ಆಡಿದ ಮಾತುಗಳು ಸರಿಯಿಲ್ಲ. ನಿಮ್ಮ ಮಾತಿನಿಂದ ನಾನು ಏನೇನೋ ಯೋಚನೆ ಮಾಡಿಬಿಟ್ಟಿದ್ದೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ನಗದು ಹಣ ನೀಡೋದು ನನ್ನ ಕೆಲಸ ಅಲ್ಲ. ಈಗಲೂ ಸ್ಪರ್ಧಿಗಳಿಗೆ ಹಣ ಬಂದಿರೋದು ನನ್ನ ಕೇಂದ್ರ ಕಚೇರಿಯಿಂದಲೇ. ನನ್ನದಲ್ಲದ ತಪ್ಪಿಗೆ ನನ್ನನ್ನು ನಿಂದಿಸಿದ್ದು ಸರಿಯೇ ಎಂದು ಪ್ರಶ್ನಿಸಿದರು.

ಜ.3 ರಂದು ನಡೆದ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ, ವೇದಿಕೆ ಮೇಲೆ ಇದ್ದ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್ ಕಂಡೊಡನೆ ತೀವ್ರವಾಗಿ ತರಾಟೆ ತೆಗೆದು ಕೊಂಡಿದ್ದರು.

ಸಚಿವರ ತರಾಟೆಯ ಅಕ್ಷರ ರೂಪ ಇಲ್ಲಿದೆ: ಇವನು ಎಲ್ಲವನ್ನು ತಿಂದು ತೇಗಿತ್ತಾನೆ. ಏ… ಅಕೌಂಟ್ ಬುಕ್ ತಗೋ ಬಾ ಈಗಲೇ. ಈಗಲೇ ಇವನನ್ನು ಸಸ್ಪೆಂಡ್ ಮಾಡಿ. ಈ ಇಸ್ ಎ ಬಾಸ್ಟೆರ್ಡ್. ಮಕ್ಕಳಿಗೆ ಕೊಡೊ ಹಣನಾದ್ರು ಕೊಡಬೇಕಲ್ವಾ? ಅದನ್ನು ಕೂಡ ತಿಂದು ತೇಗಿದ್ದಾನೆ. ಈ ಸ್ಪೋಟ್ರ್ಸ್‍ಗಾಗಿ 7 ಕೋಟಿ ರೂ. ಕೊಟ್ಟಿರೋದು ನಾವು. ಅದನ್ನು ತಿಂದು ತಿಂದು ತೇಗಿದ್ದಾನೆ. ಲೆಟ್ ಇಮ್ ದಿ ಸಸ್ಪೆಂಡ್ ನೌ. ಹೋಗ್ತಾ ಇರು ಇಲ್ಲಿಂದ ಜಾಗ ಖಾಲಿ ಮಾಡು. ನಾನು ಕ್ಯಾಬಿನೆಟ್‍ನಲ್ಲಿ ಅಪ್ರೋಲ್ ಮಾಡಿ ಸಂಸ್ಪೇಡ್ ಮಾಡಿಸ್ತಿನಿ. ನಾನು ಈವರೆಗೂ ಇಲ್ಲಿ ಒಂದು ಕಾಫಿಯನ್ನು ಕುಡಿದಿಲ್ಲ ಎಂದು ಹೇಳಿದ್ದರು. ಸಚಿವರ ಮಾತುಗಳನ್ನು ಕೇಳಿದ ಅಧಿಕಾರಿ ಸುರೇಶ್, ಮರು ಮರುಮಾತನಾಡದೆ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *