ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯನ್ನು ನನಗೆ ನಿಜವಾಗಿ ನಂಬಲು ಸಾಧ್ಯವೇ ಆಗುತ್ತಿಲ್ಲ ಎಂದು ಲಂಕೇಶ್ ಪತ್ರಿಕೆಯ ಸಹೋದ್ಯೋಗಿ ಸತೀಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಂಜೆ ನಾನು ಮೇಡಂ ಜೊತೆಗೆ ನಾನು ಗಾಂಧಿ ಬಜಾರ್ ಆಫೀಸ್ ನಲ್ಲಿದ್ದೆ. ಫೈನಲ್ ಎಡಿಶನ್ ಬಗ್ಗೆ ಮಾತನಾಡಿದ್ವಿ. ಬಳಿಕ ರಾತ್ರಿ 7.30ರ ವೇಳೆಗೆ ನಾನು ಮನೆಗೆ ಹೊರಟೆ ಅವರು ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಹೊರಟರು. ಬಳಿಕ ಏನಾಯ್ತು ಗೊತ್ತಿಲ್ಲ ಎಂದು ತಿಳಿಸಿದರು.
ಯಾವುದಾದರು ಬೆದರಿಕೆ ಇತ್ತೆ ಎಂದು ಎಂದು ಕೇಳಿದ್ದಕ್ಕೆ, ಆ ರೀತಿಯ ಯಾವುದೇ ಬೆದರಿಕೆ ಬಗ್ಗೆ ನನ್ನ ಜೊತೆ ಮಾತನಾಡಿರಲಿಲ್ಲ. ನಾನು 1996ರಿಂದ ಗೌರಿ ಲಂಕೇಶ್ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
https://youtu.be/E5KklglYg8o