ನವದೆಹಲಿ: ವೃದ್ಧೆಯೊಬ್ಬರಿಗೆ ಮನೆ ಕೆಲಸದವಳು 10 ಬಾರಿ ಚಾಕುವಿನಿಂದ ಇರಿದ ಘಟನೆ ಗುರುವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದಿದೆ.
ಇಲ್ಲಿನ ಗ್ರೇಟರ್ ಕೈಲಾಶ್-1 ರ ಅಪಾರ್ಟ್‍ಮೆಂಟ್‍ನಲ್ಲಿ ಎರಡನೇ ಮಹಡಿಯಲ್ಲಿ ವಾಸವಿದ್ದ ನೀರಜಾ ಗುಪ್ತಾ ಇರಿತಕ್ಕೊಳಗಾದ ವೃದ್ಧೆ. ಸದ್ಯ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಾಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮನೆಕೆಲಸಕ್ಕಾಗಿ 23 ವರ್ಷದ ತುಳಸಿಯನ್ನು ಇತ್ತೀಚೆಗಷ್ಟೇ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಆಕೆ ಮಾಲೀಕರ ಬಳಿ 5 ಲಕ್ಷ ರೂ. ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಳೆಂದು ವರದಿಯಾಗಿದೆ.
ಇರಿತಕ್ಕೊಳಗದ ನೀರಜಾ ಅವರು ಅದೇ ಚಾಕು ಬಳಸಿ ತುಳಸಿ ಮೇಲೆ ದಾಳಿ ಮಾಡಿದ್ದಾರೆ. ನಂತರ ಆಟೋ ರಿಕ್ಷಾ ಏರಿ ಸ್ವಲ್ಪ ದೂರ ಬಂದು ಪೊಲೀಸರಿಗೆ ಕರೆ ಮಾಡಿ, ತನಗೆ ಚಾಕುವಿನಿಂದ ಇರಿದು ಹಣ ದೋಚಿರುವುದಾಗಿ ದೂರು ನೀಡಿದ್ದಾರೆ.
ಸದ್ಯ ತುಳಸಿಯನ್ನ ಪೊಲಿಸರು ಬಂಧಿಸಿದ್ದಾರೆ.