ದರ್ಶನ್ ಪ್ರಕರಣ: ಈ ರೀತಿಯ ಘಟನೆಗಳು ಎಲ್ಲಾ ಕಡೆ ಆಗುತ್ತಿವೆ- ಅನಂತ್ ನಾಗ್

Public TV
1 Min Read

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ (Darshan) ಕುರಿತು ಮೊದಲ ಬಾರಿಗೆ ಅನಂತ್ ನಾಗ್ ಮಾತನಾಡಿದ್ದಾರೆ. ದರ್ಶನ್ ಘಟನೆ ಸಮಾಜಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ಟೆನೆಂಟ್’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್-ತಿಲಕ್ ಗೆ ಜೊತೆಯಾದ ಸೋನು ಗೌಡ

ಹಿರಿಯ ನಟ ಅನಂತ್ ನಾಗ್ (Ananth Nag) ಮಾತನಾಡಿ, ಈ ರೀತಿಯ ಘಟನೆಗಳು ಎಲ್ಲಾ ಕಡೆ ನಡೆಯುತ್ತಿವೆ ಎಂದು ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಮಾಜದ ಮೇಲೆ ಪ್ರಭಾವ ಬೀರುತ್ತೆ ಅನ್ನೋದನ್ನು ನಾನು ಒಪ್ಪಲ್ಲ. ಇದಕ್ಕಿಂತ ಸಾವಿರ ಪಟ್ಟು ದೇಶ ದೇಶಗಳ ನಡುವೆ ಮತ್ತು ರಾಜ್ಯ ರಾಜ್ಯಗಳ ನಡುವೆ ಆಗುತ್ತದೆ ಎಂದಿದ್ದಾರೆ.

ದರ್ಶನ್ ಸುದ್ದಿಯಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು ಅಷ್ಟೇ. ಸಮಾಜದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅನಂತ್ ನಾಗ್ ಮಾತನಾಡಿದ್ದಾರೆ.

Share This Article