ರಾಮ ಆಯ್ತು, ಈಗ ಸೀತೆ ಸರದಿ – ದನದ ಮಾಂಸ ತಿನ್ತಿದ್ದಳು: ಚಿಂತಕಿ ಕಲೈಸೆಲ್ವಿ

Public TV
1 Min Read

ಮೈಸೂರು: ರಾಮಾಯಣದ ರಾಮ ಆಯ್ತು ಇದೀಗ ಸೀತೆಯ ಸರದಿ. ರಾಮ ಮದ್ಯವ್ಯಸನಿ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿದ್ದಾಳೆ ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪೆರಿಯಾರ್ ವಾದಿ ಚಿಂತಕಿ ಕಲೈಸೆಲ್ವಿ ಹೇಳಿಕೆ ನೀಡಿದ್ದಾರೆ. ಸೀತೆ ಅರಣ್ಯದಲ್ಲಿ ಇದ್ದಾಗ ದನದ ಮಾಂಸ ತಿಂದಿದ್ದಾಳೆ. ದನದ ಮಾಂಸವನ್ನು ಹಸುವಿನ ತುಪ್ಪದಲ್ಲಿ ಉರಿದು ತಿಂದಿದ್ದಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ ಶ್ರೇಷ್ಠ, ಬ್ರಾಹ್ಮಣರು ಶ್ರೇಷ್ಠ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು. ವಿಷ್ಣು ಅಷ್ಟೊಂದು ಅವತಾರ ಎತ್ತಿದ್ದಾನೆ. ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಟು ದೇವಾಲಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಸಿಂಪಲ್ಲಾಗಿರಲು ಕಾರಣ ಏನು. ಇದು ಮೌಢ್ಯವನ್ನು ಹೆಚ್ಚಿಸುವ ಕೆಲಸ ಎಂದು ಕಲೈಸೆಲ್ವಿ ಹೇಳಿದ್ದಾರೆ.

ಈ ಹಿಂದೆ ವಿಚಾರವಾದಿ ಪ್ರೊಫೆಸರ್ ಕೆ. ಎಸ್ ಭಗವಾನ್ ಅವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಮನೊಂದಿಗೆ ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಕೂಡ ಟೀಕಿಸಿದ್ದು, ಭಾರೀ ಚರ್ಚೆಗೆ ಒಳಗಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *