ನ್ಯೂಇಯರ್‌ಗೆ ದಿನಗಣನೆ – ಪಬ್, ಬಾರ್ & ರೆಸ್ಟೋರೆಂಟ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೆ ಅನುಮತಿ

2 Min Read

– 30 ಅಂಶಗಳ ಮಾರ್ಗಸೂಚಿ, ಬೌನ್ಸರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ಹೊಸವರ್ಷಕ್ಕೆ (New Year 2026) ಕೌಂಟ್‌ಡೌನ್ ಶುರುವಾಗಿದ್ದು, ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ, ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ (Seemant Kumar Singh), ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ ಜೊತೆಗೆ ಸೀಮಂತ್ ಕುಮಾರ್, ನ್ಯೂ ಇಯರ್ ವೇಳೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಒಂದೇ ಬೈಕಿನಲ್ಲಿದ್ದ ನಾಲ್ವರು ಬಲಿ – ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ

ಸಭೆ ಬಳಿಕ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಸುಮಾರು 30 ಅಂಶಗಳ ಮಾರ್ಗಸೂಚಿ ನೀಡಿದ್ದೀವೆ. ಕ್ಲೌಡ್ ಕಂಟ್ರೋಲ್, ಏಜ್ ಲಿಮಿಟ್ಸ್, ಸಮಯ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ (CCTV Camera), ಶಬ್ಧ ಮಾಲಿನ್ಯ, ಹೆಣ್ಮಕ್ಕಳ ಸೇಫ್ಟಿ ಸೇರಿ 30 ಪಾಯಿಂಟ್ಸ್ ಹೇಳಲಾಗಿದೆ, ಅವುಗಳನ್ನ ಒಪ್ಪಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ಸೂಚನೆ ಕೊಟ್ಟಿದ್ದೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮನೆಗೆ ಹೋಗಿದ್ದಾಗ ಎರಡನೇ ಮಗನನ್ನ ರಾಜಕೀಯಕ್ಕೆ ತನ್ನಿ ಎಂದಿದ್ದೆ: ಮಾಜಿ ಪ್ರಧಾನಿ ದೇವೇಗೌಡ

ಇನ್ನೂ ಬೌನ್ಸರ್‌ಗಳ ಬಗ್ಗೆ ಕೆಲ ದೂರುಗಳಿದ್ದು, ಮಾಲೀಕರಿಗೆ ತಿಳಿ ಹೇಳಿದ್ದೇವೆ. ಎಂಟ್ರಿ, ಎಕ್ಸಿಟ್ ಬಗ್ಗೆ ಫೈರ್ ಸೇಫ್ಟಿ, ಪಾರ್ಕಿಂಗ್, ಎಮರ್ಜೆನ್ಸಿ ಕಾಂಟ್ಯಾಕ್ಟ್, ಹೀಗೆ ಎಲ್ಲದರ ಬಗ್ಗೆಯೂ ಸೂಚನೆ ನೀಡಲಾಗಿದೆ. ರೇವ್ ಪಾರ್ಟಿ, ಇಲ್ಲೀಗಲ್ ಪಾರ್ಟಿ ಬಗ್ಗೆ ಡಿಸ್ಪ್ಲೇ ಮಾಡಬಾರದು. ಪಟಾಕಿ, ವೆಪೆನ್‌ಗಳು ಇರಬಾರ್ದು. ಹೋಗಿ ಬರುವ ಜನರಿಗೆ ಸರತಿ ಸಾಲು ಇರಬೇಕು. ಅವರ ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ ಮಾಡಿರಬಾರದು. ಹೀಗೆ ಹಲವು ಸೂಚನೆಗಳನ್ನ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಇನ್ನೂ ಹೆಚ್ಚು ಸಮಯ ಓಪನ್ ಮಾಡಲು ಮನವಿ ಮಾಡಿದ್ರು. ಆಗಲ್ಲ ಒಂದುಗಂಟೆಗೆ ಕ್ಲೋಸ್ ಇರಬೇಕು ಎಂದು ಸೂಚಿಸಿದ್ದೇವೆ. ಜವಾಬ್ದಾರಿಯಿಂದ ಆಚರಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಅಂತಾ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ – ಯೂನಸ್ ಸರ್ಕಾರದಿಂದ 2,900 ದೌರ್ಜನ್ಯ; ಭಾರತದಿಂದ ಕಠಿಣ ಸಂದೇಶ

Share This Article