ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಸೆಕ್ಯೂರಿಟಿಯಿಂದ ಗುಂಡೇಟು

Public TV
1 Min Read

ಆನೇಕಲ್: ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯೊಂದಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಖದೀಮನ ಕಾಲಿಗೆ ಭದ್ರತಾ ಸಿಬ್ಬಂದಿ (Security) ಗುಂಡು ಹಾರಿಸಿದ (Shootout) ಘಟನೆ ಆನೇಕಲ್ ಜಿಗಣಿಯಲ್ಲಿ (Jigani) ನಡೆದಿದೆ.

ಗಂಗಾಧರ್ ಗುಂಡೇಟು ತಿಂದ ಕಳ್ಳನಾಗಿದ್ದು ಸದ್ಯ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಕೈಗಾರಿಕಾ ಪ್ರದೇಶದಲ್ಲಿರುವ ಸದರನ್ ಬ್ಯಾಟರಿ ಕಂಪನಿ ಸದ್ಯ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ತನ್ನ ಘಟಕವನ್ನು ಬಂದ್‌ ಮಾಡಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಖದೀಮರು ಸಣ್ಣ ಪುಟ್ಟ ವಸ್ತುಗಳನ್ನು ಕದಿಯುತ್ತಲೇ ಇದ್ದರು. ವಸ್ತುಗಳು ನಾಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ಓರ್ವ ಭದ್ರತಾ ಸಿಬ್ಬಂದಿ ಮತ್ತು ಓರ್ವ ಗನ್ ಮ್ಯಾನ್‌ ನಿಯೋಜಿಸಿತ್ತು.

 

ಬುಧವಾರ ನಸುಕಿನ ಜಾವ 2:30ರ ವೇಳೆಗೆ ತಾಮ್ರದ ವಸ್ತುಗಳನ್ನು ಗಂಗಾಧರ್‌ ಕಳ್ಳತನ ಮಾಡುತ್ತಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಿಬ್ಬಂದಿ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಗಂಗಾಧರ್‌ ಮೇಲೆ ಗನ್‌ನಿಂದ ಶೂಟ್ ಮಾಡಿದ್ದಾರೆ. ಇದನ್ನೂ ಓದಿ: MUDA Case | ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ – ಹೆಚ್‌ಡಿಕೆ

ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Share This Article