ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

Public TV
2 Min Read

ಚೆನ್ನೈ: ಜಾತ್ಯಾತೀತತೆ ಎನ್ನುವುದು ಯುರೋಪಿಯನ್ ದೇಶದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (Governer R N Ravi) ಹೇಳಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ಯಾಕುಮಾರಿಯ (Kanyakumari) ತಿರುವಟ್ಟಾರ್‌ನಲ್ಲಿ ನಡೆದ ಹಿಂದೂ ಧರ್ಮದ ವಿದ್ಯಾಪೀಠಂನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ (Secularism) ಎನ್ನುವುದು ಪಶ್ಚಿಮದ ದೂರದ ದೇಶದಿಂದ ಬಂದ ಪರಿಕಲ್ಪನೆಯಾಗಿದ್ದು, ಜಾತ್ಯಾತೀತತೆಗೆ ಭಾರತದಲ್ಲಿ ನೆಲೆಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: MUDA Case| ಮಂಗಳವಾರ ಸಿಎಂಗೆ ಬಿಗ್‌ ಡೇ – ತೀರ್ಪು ಬೆನ್ನಲ್ಲೇ ನಡೆಯಲಿದೆ CLP ಸಭೆ

ಯೂರೋಪಿನಲ್ಲಿ (Europe) ಚರ್ಚ್ ಹಾಗೂ ರಾಜರ ನಡುವೆ ಜಗಳ ಉಂಟಾದಾಗ ಜಾತ್ಯಾತೀತತೆ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಧರ್ಮ ಎಂಬ ಪರಿಕಲ್ಪನೆ ಇರಬೇಕಾದರೆ ಜಾತ್ಯಾತೀತತೆ ಅಗತ್ಯವಿಲ್ಲ. ಅದು ಯೂರೋಪಿನಲ್ಲಿಯೇ ಇರಲಿ. ಈ ದೇಶದ ಜನರ ಮೇಲೆ ಬಹಳಷ್ಟು ವಂಚನೆ ಮಾಡಲಾಗಿದೆ. ಅದರಲ್ಲಿ ಈ ಜಾತ್ಯಾತೀತತೆಯು ಒಂದು. ಇದು ಜನರಿಗೆ ತಪ್ಪು ಕಲ್ಪನೆಯನ್ನು ನೀಡುತ್ತಿದೆ ಎಂದರು.

ಈ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳಿಂದ ಭಾರೀ ವಿವಾದ ವ್ಯಕ್ತವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (Communist Party Of  India) ನಾಯಕಿ ಬೃಂದಾ ಕಾರಟ್ (Brinda Karat) ಮಾತನಾಡಿ, ರಾಜ್ಯಪಾಲರಿಗೆ ಸಂವಿಧಾನದ ಮೌಲ್ಯ ಏನು ಎಂದು ತಿಳಿದಿಲ್ಲ. ಸಂವಿಧಾನವು ವಿದೇಶಿ ಪರಿಕಲ್ಪನೆ ಎಂದು ಹೇಳುತ್ತಾರೆ. ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ಇದನ್ನೆಲ್ಲ ಪ್ರಶ್ನಿಸುತ್ತಾ ರಾಜ್ಯಪಾಲರ ಸ್ಥಾನದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ತಮಿಳುನಾಡು ಕಾಂಗ್ರೆಸ್ ಸಂಸದ ಮಣಿಕ್ಕಂ ಟಾಗೋರ್ (Manickam Tagore) ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಜಾತ್ಯಾತೀತತೆ ವಿದೇಶಗಳಲ್ಲಿ ವಿಭಿನ್ನವಾಗಿರಬಹುದು. ಭಾರತದಲ್ಲಿ ನಾವು ಪ್ರತಿಯೊಂದು ಧರ್ಮವನ್ನು, ಅವರ ಆಚರಣೆಗಳನ್ನು ಹಾಗೂ ಅವರ ಸಂಪ್ರದಾಯಗಳನ್ನು ಗೌರವಿಸುತ್ತೇವೆ. ಇದು ಭಾರತದಲ್ಲಿರುವ ಜಾತ್ಯಾತೀತದ ಕಲ್ಪನೆಯಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ‘ಬಿಗ್‌ ಬಾಸ್‌ 11’ರಲ್ಲಿ ಸುದೀಪ್‌ ಕಾಸ್ಟ್ಯೂಮ್‌ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ

Share This Article