ಕರ್ನಾಟಕದಲ್ಲೇ ಫಸ್ಟ್- ಈಗ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು

Public TV
1 Min Read

ಕಾರವಾರ: ಭಾರತೀಯ ನೌಕಾದಳ ಸಮರಾಭ್ಯಾಸ ನೆಡೆಸುತ್ತಿದ್ದ ದ್ವೀಪ ಈಗ ಕರ್ನಾಟಕದಲ್ಲೇ ಮೊದಲ ಜಲಕ್ರೀಡಾ ಸಾಹಸ ಸ್ಥಳವಾಗಿದ್ದು ದೇಶ ವಿದೇಶಿಗರನ್ನ ಸೆಳೆಯುತ್ತಿದೆ.

ಇದ್ಯಾವುದೋ ವಿದೇಶದ ದೃಶ್ಯ ಅಂದ್ಕೊಬೇಡಿ. ಇದು ನಮ್ಮ ಉತ್ತರಕನ್ನಡ ಜಿಲ್ಲೆಯ ದೃಶ್ಯ. ಭಟ್ಕಳ ತಾಲೂಕಿನ ಮುರುಡೇಶ್ವರದ ನಡುಗುಡ್ಡೆ ನೇತ್ರಾಣಿ ಈಗ ಪ್ರವಾಸಿಗರ ಹಾಟ್‍ಸ್ಪಾಟ್. ನೌಕಾದಳದ ಸಮಸರಾಭ್ಯಾಸದಿಂದ ಜೀವವೈವಿಧ್ಯಕ್ಕೆ ಕಂಟಕ ಎದುರಾಗಿದ್ದ ನೇತ್ರಾಣಿಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು. ಆದ್ರೆ ಎರಡು ತಿಂಗಳ ಹಿಂದೆ ಜಿಲ್ಲಾಡಳಿತ ಇಲ್ಲಿ ಜಲಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ. ನೇತ್ರಾಣಿ ಅಡ್ವೆಂಚರ್ ಸಂಸ್ಥೆ ಜಲಸಾಹಸ ಕ್ರೀಡೆಗಳನ್ನ ನಡೆಸ್ತಿದೆ.

ಸ್ಕೂಬಾ ಡೈವ್ ಮಾಡಲು ಈ ಹಿಂದೆ ಅಂಡಮಾನ್-ನಿಕೋಬಾರ್ ಆಥವಾ ವಿದೇಶಗಳಿಗೆ ಹೋಗಬೇಕಿತ್ತು. ಇದೀಗ ಮುರುಡೇಶ್ವರದಿಂದ 19 ಕಿಲೋಮೀಟರ್ ದೂರದಲ್ಲಿರುವ ಈ ಚಿಕ್ಕ ದ್ವೀಪಕ್ಕೆ ಬೋಟ್‍ನಲ್ಲಿ ತೆರಳಿದರೆ ಸಾಕು.

ಇಲ್ಲಿನ ಸಮುದ್ರ ಭಾಗ ಹವಳಗಳಿಂದ ಕೂಡಿದೆ. ಅಲ್ಲದೇ ಸಾವಿರಾರು ಜಾತಿಯ ಮೀನುಗಳ ವಾಸಸ್ಥಳವಾಗಿದೆ. ಹೀಗಾಗಿ ನೇತ್ರಾಣಿ ಸಾಹಸಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ. ನೀವೂ ಒಮ್ಮೆ ಭೇಟಿ ಕೊಡಿ.

Share This Article
Leave a Comment

Leave a Reply

Your email address will not be published. Required fields are marked *