ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು

Public TV
1 Min Read

ವಾಷಿಂಗ್ಟನ್: ಪ್ಲುಟೋವನ್ನು ಸೌರಮಂಡಲದ ಗ್ರಹಗಳ ಗುಂಪಿನಿಂದ ಹೊರ ತಳ್ಳಿ 16 ವರ್ಷಗಳೇ ಕಳೆದಿವೆ. ಆದರೂ ಪ್ಲುಟೋವಿನ ಹೊಸ ಹೊಸ ವಿಸ್ಮಯ, ಕುತೂಹಲಗಳನ್ನು ಒಂದೊಂದಾಗಿಯೇ ವಿಜ್ಞಾನಿಗಳು ಬಯಲಿಗೆಳೆಯುತ್ತಲೇ ಇದ್ದಾರೆ.

ಇದೀಗ ವಿಜ್ಞಾನಿಗಳು ಪ್ಲುಟೋ ಮೇಲ್ಮೈಯಲ್ಲಿ ಮಂಜುಗಡ್ಡೆಯ ಜ್ವಾಲಾಮುಖಿ ಇರುವಿಕೆಯ ಸುಳಿವನ್ನು ಪತ್ತೆಹಚ್ಚಿದ್ದಾರೆ. ಇಂತಹ ನಿಗೂಢ ಅಂಶ ಸೌರವ್ಯೂಹದ ಬೇರೆ ಯಾವ ಗ್ರಹಗಳಲ್ಲೂ ಇಲ್ಲ ಎಂಬ ವಿಷಯವನ್ನೂ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಫೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

ನ್ಯೂ ಹೊರೈಜನ್ಸ್ ಮಿಷನ್‌ನ ಖಗೋಳಶಾಸ್ತ್ರಜ್ಞರ ತಂಡ ಈ ದೂರದ ಪ್ಲುಟೋ ಮೇಲ್ಮೈಯಲ್ಲಿ ಹಿಮದಿಂದ ರೂಪುಗೊಂಡ ಬೆಟ್ಟಗಳು, ದಿಬ್ಬಗಳು ಹಾಗೂ ತಗ್ಗುಗಳಿಂದ ಸುತ್ತುವರಿದ ದೊಡ್ಡ ಗುಮ್ಮಟಗಳ ಪ್ರದೇಶವನ್ನು ಪತ್ತೆಹಚ್ಚಿದೆ. ಈ ಭಾರೀ ಬೆಟ್ಟಗಳ ಸೃಷ್ಟಿಗೆ ದೊಡ್ಡ ಮಟ್ಟದ ಸ್ಫೋಟದ ಸ್ಥಳಗಳ ಅಗತ್ಯವಿದೆ. ಇದು ಅದರ ಮೇಲ್ಮೈಯಲ್ಲಿ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

ಈ ಮಂಜುಗಡ್ಡೆಯ ಜ್ವಾಲಾಮುಖಿ ಪ್ರದೇಶ 1 ರಿಂದ 7 ಕಿ.ಮಿ ಗಳಷ್ಟು ಎತ್ತರ ಹಾಗೂ 30 ರಿಂದ 100 ಅಥವಾ ಅದಕ್ಕಿಂತಲೂ ಹೆಚ್ಚು ಕಿ.ಮಿ ಗಳವರೆಗಿನ ಗುಮ್ಮಟಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *