ಬೆಂಗ್ಳೂರಲ್ಲಿ ಗುರುವಾರದಿಂದ ಶಾಲಾ, ಕಾಲೇಜ್ ಬಂದ್ – ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿರುವ ಹಿನ್ನೆಲೆ ಹೊಸ ಬೆಂಗಳೂರಿನಲ್ಲಿ ಗುರುವಾರದಿಂದ  10 ಮತ್ತು 12ನೇ ತರಗತಿ ಹೊರತುಪಡಿಸಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೋವಿಡ್-19 ಜೊತೆ ಸಭೆಯ ಬಳಿಕ ಮಾಧ್ಯಮಗಳ ಜೊತೆ  ಸಚಿವ ಆರ್‌. ಅಶೋಕ್‌ ಮತ್ತು ಡಾ.ಕೆ ಸುಧಾಕರ್‌ ಮಾತನಾಡಿ, ಮುಂದಿನ ಶುಕ್ರವಾರದಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೊಸ ಮಾರ್ಗಸೂಚಿ ಜನವರಿ 5 ರ ರಾತ್ರಿ 10ರಿಂದ ಜನವರಿ‌ 19 ರ ಬೆಳಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ ಎಂದರು.

ವೀಕೆಂಡ್ ಕರ್ಫ್ಯೂ ವೇಳೆ ತರಕಾರಿ, ದಿನಸಿ, ಮಾಂಸದ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಳಿಗೆ ಮಾತ್ರ ಅನುಮತಿ. ಕೋವಿಡ್ 2 ಲಸಿಕೆ ಹಾಕಿದವರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.

ಎಲ್ಲಾ ಪಬ್, ಬಾರ್, ಜಿಮ್ ಥಿಯೇಟರ್‌ಗಳಿಗೆ 50:50 ರೂಲ್ಸ್ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಸಭೆ ಸಮಾರಂಭಗಳಿಗೆ 200 ಮಂದಿಗೆ ಗಷ್ಟೇ ಅವಕಾಶ ನೀಡಲಾಗಿದ್ದು, ಮದುವೆ ಹೋರಾಂಗಣದಲ್ಲಿ 200 ಜನರಿಗೆ ಮತ್ತು ಒಳಾಂಗಣ ಕಾರ್ಯಕ್ರಮಕ್ಕೆ 100 ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ದೇವಸ್ಥಾನಗಳಿಗೆ 50 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ಯಾವುದೇ ರ‍್ಯಾಲಿ, ಸಭೆ, ಸಮಾರಂಭಗಳು ನಡೆಯುವಂತಿಲ್ಲ. ಮೆಟ್ರೋ, ಬಸ್‍ಗಳಿಗೂ ನಿರ್ಬಂಧ ವಿಧಿಸಲಾಗಿದ್ದು, ಸೀಟು ಇರುವಷ್ಟೇ ಪ್ರಯಣಿಕರಿಗೆ ಅವಕಾಶ ನೀಡಲು ಮುಂದಾಗಿದ್ದು, ಬಿಎಂಟಿಸಿ, ಮೆಟ್ರೋಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ. ಎಂದು ಸರ್ಕಾರ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *