ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಪ್ರಿನ್ಸಿಪಾಲ್ ಸೇರಿ 7 ಮಂದಿ ಅರೆಸ್ಟ್

By
1 Min Read

– ಈ ಹಿಂದೆಯೂ ಪೋಕ್ಸೋ ಕೇಸ್‍ಲ್ಲಿ ಜೈಲು ಸೇರಿದ್ದ ಆರೋಪಿ

ಮುಂಬೈ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ (Maharashtra) ಪುಣೆಯ (Pune) ಪಿಂಪ್ರಿ ಚಿಂಚ್‍ವಾಡ್ ಪೊಲೀಸರು ಶಾಲೆಯೊಂದರ (School) ಪ್ರಿನ್ಸಿಪಾಲ್, ದೈಹಿಕ ಶಿಕ್ಷಕ, ಟ್ರಸ್ಟಿ ಮತ್ತು ಇತರ ನಾಲ್ವರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಿಟಿ ಶಿಕ್ಷಕ, ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಹಿಂದೆಯೂ ಕಿರುಕುಳ ಮತ್ತು ಪೋಕ್ಸೋ ಕಾಯ್ದೆ (POCSO Act) ಅಡಿ ಆತನನ್ನು ಬಂಧಿಸಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: Maharashtra | ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್‌ ಪತನ – ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರ

ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಉಳಿಸಿಕೊಂಡಿತ್ತು. ಈ ನಿರ್ಲಕ್ಷ್ಯಕ್ಕಾಗಿ ಪ್ರಾಂಶುಪಾಲರು ಮತ್ತು ಟ್ರಸ್ಟಿ ಸೇರಿದಂತೆ ಇತರ ಆರು ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಅಡಿಯಲ್ಲಿ ಪೋಕ್ಸೋ ಕಾಯ್ದೆಯ ಜೊತೆ ಬಿಎನ್‍ಎಸ್‍ನ 74, 78, 79, 351(2), ಮತ್ತು 115(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ – ಬಾಳೆ ತೋಟದಲ್ಲಿ ಶವ ಪತ್ತೆ

Share This Article