ಜಗಳೂರು | ಶಾಲೆಯ ಅಡುಗೆ ಕೊಠಡಿ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಕಳ್ಳತನ

1 Min Read

ದಾವಣಗೆರೆ: ಸರ್ಕಾರಿ ಶಾಲೆಯ (School) ಅಡುಗೆ ಕೊಠಡಿ ಬೀಗ ಮುರಿದು ದಿನಸಿ ಸಾಮಗ್ರಿ, ಪಾತ್ರೆಗಳು ಸಿಲಿಂಡರ್ ಕಳ್ಳತನ ಮಾಡಿರುವ ಘಟನೆ ಜಗಳೂರು (Jagalur) ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.

ಇಂದು (ನ.30) ಬೆಳಗ್ಗೆ ಶಾಲೆಯ ಬಳಿ ಸ್ಥಳೀಯರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯದ್ವಾರದ ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಬಳಿಕ ಬಿಸಿಯೂಟದ ಕೊಠಡಿಯ ಬೀಗ ಮುರಿದು ನಾಲ್ಕು ಸಿಲಿಂಡರ್, ಕಬ್ಬಿಣದ ಒಲೆ, ಒಂದು ಕ್ವಿಂಟಾಲ್ ತೊಗರಿಬೇಳೆ, ಅಡುಗೆ ಮಾಡುವ ಪಾತ್ರೆ ಸಾಮಗ್ರಿಗಳು, ಕ್ರೀಡಾ ಉಪಕರಣಗಳು, ಮೋಟರ್ ಪಂಪ್‍ಗಳನ್ನು ಕದ್ದು ಹೋಗಿದ್ದಾರೆ. ಇದನ್ನೂ ಓದಿ: Bengaluru | ಬೈಕ್‌ಗೆ ಕಂಟೇನರ್ ಡಿಕ್ಕಿ; ತಾಯಿ-ಮಗ ಸಾವು

ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರನ್ನು ಕೂಡಲೇ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು, ಚೆನೈ ಹೈವೇಯಲ್ಲಿ 4 ಕಾರು, ಲಾರಿ ನಡುವೆ ಸರಣಿ ಅಪಘಾತ – ಐವರಿಗೆ ಗಂಭೀರ ಗಾಯ

Share This Article