ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Public TV
1 Min Read

– ನಿತ್ಯ ಐದಾರು ಕಿ.ಮೀ. ನಡೆದು ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು

ಯಾದಗಿರಿ: ಶಿಕ್ಷಣ ಸಚಿವ ನಾಗೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದ್ದು, ನಿತ್ಯ ಐದಾರು ಕಿಲೋಮೀಟರ್ ನಡೆದು ಶಾಲೆಗೆ ಪರಿಸ್ಥಿತಿ ಇದೆ.

ಜಿಲ್ಲೆಯ ಕಟಗಿ ಶಹಾಪುರ, ಹೊರುಂಚಾ, ಯಡ್ಡಳಿ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಗೆ ಬರುತ್ತಲೇ ಫುಲ್ ಸುಸ್ತಾಗುತ್ತೆ, ಸರಿಯಾಗಿ ಪಾಠಕೇಳಲು ಆಗುತ್ತಿಲ್ಲ, ಶಾಲೆ ಮುಗಿಸಿಕೊಂಡು ಮನೆಗೆ ಹೋಗಬೇಕಾದರೆ ಸಂಜೆ ಆಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಕೈ ಮುಗಿದು ಕೇಳಿಕೊಳ್ಳುತ್ತೇವೆ ದಯವಿಟ್ಟು ನಮಗೆ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಶಿಕ್ಷಣ ಸಚಿವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಿವ್‌ ಇನ್‌ ರಿಲೇಷನ್‌ಶಿಪ್‌ ಜೊತೆಗಿದ್ದ ಯುವಕನ ಕೊಂದಳಾಕೆ..!

ಅವ್ಯವಸ್ಥೆಯ ಆಗರವಾದ ಯಡ್ಡಳಿ ಶಾಲೆ
ಯಾದಗಿರಿ ತಾಲೂಕಿನ ಯಡ್ಡಳಿಯ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದ್ದು, ಶಿಕ್ಷಕರ ನಿರ್ಲಕ್ಷ್ಯವನ್ನು ಕೇಳೋರಿಲ್ಲ ಹೇಳೋರಿಲ್ಲ ಎನ್ನುವಂತಾಗಿದೆ. ಶಾಲೆಯಲ್ಲಿ ಯಾವುದೇ ಕೋವಿಡ್ ನಿಯಮಗಳು ಇಲ್ಲ. ಕಾನೂನು ಬಾಹಿರವಾಗಿ ಒಂದನೆಯ ತರಗತಿಯಿಂದ ಕ್ಲಾಸ್ ಆರಂಭ ಮಾಡಲಾಗಿದೆ. ಅಲ್ಲದೆ ಒಂದು ಬೆಂಚ್ ನಲ್ಲಿ ಆರರಿಂದ ಏಂಟು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುತ್ತಿದ್ದು, ಕ್ಲಾಸ್ ನಲ್ಲಿ ಸಾಮಾಜಿಕ ಅಂತರ ಇಲ್ಲ, ಶಾಲೆಗೆ ಸ್ಯಾನಿಟೈಸಿಂಗ್ ಸಹ ಮಾಡಿಸಿಲ್ಲ.

ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಾತಿಗೆ ಇಲ್ಲಿನ ಶಿಕ್ಷಕರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸ್ವತಃ ಶಿಕ್ಷಕರೇ ಇಲ್ಲಿ ಮಾಸ್ಕ್ ಹಾಕಲ್ಲ. ಹೀಗೆ ಶಿಕ್ಷಕರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *