ಹಾಯ್, ಹಲೋ ಅನ್ನೊ ಬದ್ಲು ಸ್ವಚ್ಛ ಭಾರತವೆಂದು ಮಾತುಕತೆ ಆರಂಭಿಸಿ: ನಾರಾಯಣ ಗೌಡ

Public TV
2 Min Read

ವಿಜಯನಗರ: ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ ಎಂದು ವಿದ್ಯಾರ್ಥಿಗಳು, ಯುವ ಜನತೆಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಕರೆ ನೀಡಿದರು.

ವಿಶ್ವಪ್ರಸಿದ್ಧ ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ಸಂಘಟನೆ, ಎನ್‍ಎಸ್‍ಎಸ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಕ್ಲೀನ್ ಇಂಡಿಯಾ ಅಭಿಯಾನ ನಡೆಯುತ್ತಿದ್ದು, ವಿಶ್ವಪ್ರಸಿದ್ಧ ಹಂಪಿಯಲ್ಲಿ ಸ್ವಚ್ಛ ಭಾರತ ಹಾಗೂ ಸ್ವಚ್ಛ ಹಂಪಿ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

ಹಂಪಿ ವಿಶ್ವಪ್ರಸಿದ್ಧ ಸ್ಥಳ. ಇಲ್ಲಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ದೇಶಕ್ಕೆ ಹೆಸರು ತರಬೇಕು. 100 ಜನರಿಂದ ಸಾವಿರ ಜನ, ಸಾವಿರ ಜನರಿಂದ ಹತ್ತು ಸಾವಿರ ಜನರು ಹೀಗೆ ಎಲ್ಲರೂ ಕೈಗೂಡಿಸುವುದರಿಂದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ ಆಗಲಿದೆ. ನಮ್ಮ ಕಸವನ್ನು ನಾವೇ ಸಂಗ್ರಹಿಸಬೇಕು. ಆದರೆ ನಮ್ಮಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಎಲ್ಲೆಂದರಲ್ಲಿ ಒಂದು ಟಿಶ್ಯೂ ಪೇಪರ್ ಕೂಡ ಹಾಕುವಂತಿಲ್ಲ. ಒಂದು ವೇಳೆ ಯಾರಾದ್ರೂ ಕಸ ಹಾಕಿದ್ರೇ ದಂಡ ಇಲ್ಲ, ಜೈಲಿಗೆ ಹಾಕುತ್ತಾರೆ. ಆದರೆ ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮಲ್ಲಿ ಆ ಮಟ್ಟಕ್ಕೆ ಹೋಗುವುದು ಬೇಡ, ನಮ್ಮ ಕೆಲಸವನ್ನು ನಾವೇ ಮಾಡಬೇಕು ಎಂದು ಅವರು ಕರೆ ನೀಡಿದರು.

agriculture pond

ಹಿಂದೆ ನಮ್ಮ ಊರುಗಳಲ್ಲಿ ಪ್ರತಿ ಸೋಮವಾರದಂದು ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಎಲ್ಲರೂ ಮನೆ ಅಥವಾ ಊರುಗಳನ್ನು ಸ್ವಚ್ವತೆಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ವಿ. ಸ್ವಯಂ ಪ್ರೇರಿತವಾಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು, ಶಿಕ್ಷಣದ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಶಾಲೆ-ಕಾಲೇಜುಗಳು ಸೇರಿದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ನಮ್ಮ ದೇಶ ಎಂದು ಕಾಳಜಿ ಬರಬೇಕು. ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರು ಸುಧಾರಣೆ ಮಾಡಿಕೊಂಡರೇ ಸ್ವಚ್ಛ ಭಾರತ ಯಶಸ್ವಿ ಆಗಲಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ

ದೇಶದ 744 ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಕ್ಲೀನ್ ಇಂಡಿಯಾ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಐದೂವರೆ ಲಕ್ಷ ಕೆಜಿ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಇದೇ ವೇಳೆ ಸಿಗರೇಟ್ ಪ್ಯಾಕ್ ಮೇಲೆ ಹಾಕುವಂತೆ ಪ್ಲಾಸ್ಟಿಕ್ ಬಾಟಲ್‍ಗಳ ಮೇಲೂ, ಜಾಗೃತಿ ಸಂದೇಶವನ್ನು ಹಾಕುವಂತೆ ಸಚಿವ ನಾರಾಯಣಗೌಡ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ಪ್ರಕಾಶ್ ವೈದ್ಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *