‘ಸಲಾರ್’ ಬಳಿಕ ಬಂಪರ್ ಆಫರ್ ಗಿಟ್ಟಿಸಿಕೊಂಡ ಭಜರಂಗಿ ಲೋಕಿ

By
1 Min Read

ಲಾವಿದರಿಗೆ ಭಾಷೆಯ ಬೇಲಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಕನ್ನಡದ ಕಲಾವಿದರು ಪರಭಾಷೆಯಲ್ಲೂ ಮಿಂಚುತ್ತಾ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಾ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಕನ್ನಡದ ‘ಭಜರಂಗಿ’ ವಿಲನ್ ಸೌರವ್‌ ಲೋಕೇಶ್ ಅವರು ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ.

ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಭಜರಂಗಿ ಲೋಕಿ ಅವರು ಇತ್ತೀಚೆಗೆ ರಿಲೀಸ್ ಆದ ‘ಸಲಾರ್’ (Salaar) ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಭಾಸ್ (Prabhas) ನಟನೆಯ ಚಿತ್ರದಲ್ಲಿ ಗುರುಂಗ್ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಜೆಟ್ ಪ್ರಾಜೆಕ್ಟ್‌ಗಳು ನಟ ಲೋಕಿಗೆ ಅರಸಿ ಬರುತ್ತಿದೆ. ತೆಲುಗಿನಲ್ಲಿ ಮತ್ತೆ ಸ್ಟಾರ್ ನಟನ ಮುಂದೆ ಅಬ್ಬರಿಸುವ ಚಾನ್ಸ್ ದಕ್ಕಿದೆ. ಇದನ್ನೂ ಓದಿ:ಅಂಬಾರಿ ಆನೆ ‘ಅರ್ಜುನ’ಗೆ ಕಾಟೇರ ಸಿನಿಮಾ ಅರ್ಪಣೆ

ಮೆಗಾಸ್ಟಾರ್ ಚಿರಂಜೀವಿ ನಟನೆಯ 156ನೇ ಚಿತ್ರ ‘ವಿಶ್ವಾಂಭರ’ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಪೌರಾಣಿಕ ಕಥೆಯುಳ್ಳ ಈ ಚಿತ್ರದಲ್ಲಿ ಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ತೆಲುಗು ಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ನಟಿಸುತ್ತಾ ಇರೋದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ ‘ಆಚಾರ್ಯ’ ಸಿನಿಮಾದಲ್ಲಿ ಸೌರವ್‌ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Share This Article