– ಹುಬ್ಬಳ್ಳಿ ನಿವಾಸಿ ಅಬ್ದುಲ್ ದುರ್ಮರಣ
ಹುಬ್ಬಳ್ಳಿ: ಸೌದಿ ಅರೇಬಿಯಾದಲ್ಲಿ (Saudi Arabia) ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಓರ್ವ ಕನ್ನಡಿಗ (Kannadiga) ಕೂಡ ಸಾವನ್ನಪ್ಪಿದ್ದಾರೆ. ಬಸ್ ದುರಂತದಲ್ಲಿ 45 ಮಂದಿ ಭಾರತೀಯರು ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯ ಅಬ್ದುಲ್ ಘಣಿ ಶಿರಹಟ್ಟಿ (55) ಸಾವಿಗೀಡಾಗಿರುವ ಕನ್ನಡಿಗ. ಇವರು ಹುಬ್ಬಳ್ಳಿ (Hubballi) ನಗರದ ಗಣೇಶಪೇಟ್ ನಿವಾಸಿ. ದುಬೈನಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ದುಬೈನಿಂದ ಸೌದಿಗೆ ಉಮ್ರಾಗೆ ಹೋಗಿದ್ದರು. ಇದನ್ನೂ ಓದಿ: ಸೌದಿಯಲ್ಲಿ ಭೀಕರ ಬಸ್ ದುರಂತ – 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನ
ಎರಡು ತಿಂಗಳ ಅಬ್ದುಲ್ ಘಣಿ ಹಿಂದೆ ದುಬೈಗೆ ಹೋಗಿದ್ದರು. ನ.9 ರಂದು ದುಬೈನಿಂದ ಸೌದಿಗೆ ಹೋಗಿದ್ದರು. ಅಬುದಾಬಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಡ್ರೈವರ್ ಕೂಡ ಆಗಿದ್ದರು.
ಈಗ ಸೌದಿಯಲ್ಲಿ ಹುಬ್ಬಳ್ಳಿ ನಿವಾಸಿ ಅಬ್ದುಲ್ ಅವರ ಮೃತದೇಹ ಇದೆ. ಹೀಗಾಗಿ, ತಮ್ಮನ್ನು ಸೌದಿಗೆ ಕಳುಹಿಸುವಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಬ್ದುಲ್ ಅವರ ಮಕ್ಕಳಾದ ಅಂಜುಮ್, ಮೌಲಾಲಿ, ನಫಿಸಾ, ರೇಷ್ಮಾ, ಹೆಂಡತಿ ಜಬಿನಾ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸೌದಿ ಅರೇಬಿಯಾ ಬಸ್ ದುರಂತ – ಬದುಕುಳಿದ ಓರ್ವ ಪ್ರಯಾಣಿಕ
ಹುಬ್ಬಳ್ಳಿ ಗಣೇಶ ಪೇಟೆಯ ಶೆಟ್ಟರ್ ಓಣಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ಮುಖ ನೋಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ‘ಪಬ್ಲಿಕ್ ಟಿವಿ’ ಎದುರು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಮೃತ ಅಬ್ದುಲ್ ಮನೆಗೆ ಮುಸ್ಲಿಂ ಮುಖಂಡರ ಭೇಟಿ ನೀಡಿದ್ದಾರೆ. ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎಂಐ ಹಿಂಡಸಗೇರಿ ಪ್ರತಿಕ್ರಿಯಿಸಿ, ಹಜ್ ಸಚಿವರು ಮತ್ತು ಡಿಸಿ ಜೊತೆಗೆ ಮಾತುಕತೆ ನಡೆಸಿದ್ದೇವೆ. ಸೌದಿಗೆ ತೆರಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದೇವೆಂದು ತಿಳಿಸಿದ್ದಾರೆ.

