‘ದಸರಾ’ ನಂತರ ಮತ್ತೆ ಜೊತೆಯಾದ ಸತೀಶ್ ನೀನಾಸಂ ಮತ್ತು ಶರ್ಮಿಳಾ

By
1 Min Read

ಭಿನಯ ಚತುರ ನೀನಾಸಂ ಸತೀಶ್ (Satish Ninasam) ಮತ್ತು ಶರ್ಮಿಳಾ ಮಾಂಡ್ರೆ (Sharmila Mandre) ಈಗಾಗಲೇ ‘ದಸರಾ’ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಈ ನಡುವೆ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಈ ಜೋಡಿ ಮತ್ತೊಂದು ಸಿನಿಮಾದಲ್ಲಿ (New Movie) ಒಟ್ಟಾಗಿ ಕೆಲಸ ಮಾಡಲಿದೆ. ಈ ಚಿತ್ರಕ್ಕೆ ಪೆಪೆ ಹೆಸರಿನ ಚಿತ್ರ ಮಾಡಿರುವ ಶ್ರೀಲೇಶ್ (Srilesh) ನಿರ್ದೇಶಕ ಎಂದು ಹೇಳಲಾಗುತ್ತಿದೆ.

ನಿರ್ದೇಶಕರು ಮತ್ತು ಸತೀಶ್ ಈಗಾಗಲೇ ಭೇಟಿಯಾಗಿದ್ದು, ಕಥೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆ. ಸದ್ಯ ನಿರ್ದೇಶಕರು ಪೆಪೆ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

ದಸರಾ ಸಿನಿಮಾಗೆ ಶರ್ಮಿಳಾ ಮಾಂಡ್ರೆ ಅವರೇ ನಿರ್ಮಾಪಕರು. ಈ ಹೊಸ ಸಿನಿಮಾಗೂ ಅವರೇ ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ದಸರಾ ಸಿನಿಮಾದ ಬಹುತೇಕ ಕೆಲಸ ಮುಗಿದಿದ್ದು, ಮೊದಲ ಬಾರಿಗೆ ಸತೀಶ್ ಮತ್ತು ಶರ್ಮಿಳಾ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣವಾಗಿದೆ.

ಸತೀಶ್ ಈ ಸಿನಿಮಾದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ವಿದೇಶದಲ್ಲೂ ಕೆಲ ದೃಶ್ಯಗಳನ್ನು ದಸರಾಗಾಗಿ ಸೆರೆ ಹಿಡಿಯಲಾಗಿದೆ. ಅಲ್ಲದೇ, ಮೈಸೂರು ದಸರಾ ವೇಳೆಯಲ್ಲೂ ಕೆಲವು ಅಂಶಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಸಿನಿಮಾ ಕಲರ್ ಫುಲ್ ಆಗಿ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್