ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ

Public TV
1 Min Read

ಬೆಂಗಳೂರು: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ರಾಜಕೀಯದ ಪಾಠ ಹೇಳಿದ್ದಾರೆ.

ರಾಜಣ್ಣರನ್ನ (K N Rajanna) ಸಂಪುಟದಿಂದ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣರನ್ನ ವಜಾ ಮಾಡಿರುವುದು ಹೈಕಮಾಂಡ್‌ನ ನಿರ್ಧಾರ. ಅದರ ಬಗ್ಗೆ ರಾಜಣ್ಣ ಅವರೇ ಹೇಳಿದ್ದಾರೆ. ದೆಹಲಿಗೆ ಹೋಗೋದಾಗಿ ಅವರೇ ಹೇಳಿದ್ದಾರೆ. ಆಮೇಲೆ ಪಿತೂರಿ ಅಂತ ಹೇಳಿದ್ದಾರೆ. ಹೈಕಮಾಂಡ್ ಹತ್ರ ಹೋಗಿ ಅವರು ಮಾತಾಡ್ತಾರೆ. ವಜಾದ ಬಗ್ಗೆ ವ್ಯಾಖ್ಯಾನ ಮಾಡೋಕೆ ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ

ಇದನ್ನ ಸಮುದಾಯಕ್ಕೆ ಮಾಡಿದ ಮೋಸ ಅಂತ ಹೇಳಲಾಗೊಲ್ಲ. ಏನು ಅಂತ ರಾಜಣ್ಣ ಮುಂದೆ ಹೇಳ್ತೀನಿ ಅಂದಿದ್ದಾರೆ. ಮುಂದೆ ನೋಡೊಣ.ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ.ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ದೆಹಲಿಗೆ ರಾಜಣ್ಣ ಹೋಗ್ತೀನಿ ಅಂತ ಹೇಳಿದ್ದಾರೆ. ಆಗ ಎಲ್ಲವೂ ಸರಿ ಹೋಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

ಇದು ನಮ್ಮ ಪಕ್ಷದ ನಿರ್ಧಾರ ವಿಪಕ್ಷಗಳು ಯಾಕೆ ಮಾತಾಡ್ತಾರೆ. ಸಿಎಂ ಅವರು ಸ್ಪಷ್ಟನೆ ಕೊಡ್ತಾರೆ. ದೆಹಲಿಗೆ ಹೋದ ಮೇಲೆ ಎಲ್ಲವೂ ತಿಳಿಯಾಗಬಹುದು. ರಾಜಕೀಯದಲ್ಲಿ ಹುಷಾರಾಗಿ ಇರಬೇಕು. ಇಲ್ಲದೆ ಹೋದ್ರೆ ಹೀಗೆ ಆಗುತ್ತದೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರೋದು ಸಾಮಾನ್ಯ ಎಂದು ಹೇಳಿದ್ದಾರೆ.

ಸೆಟಲ್‌ಮೆಂಟ್ ಪಾಲಿಟಿಕ್ಸ್ ಇದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದೆಲ್ಲವೂ ಇರುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದ್ರೆ ಹೀಗೆ ಆಗುತ್ತದೆ. ಹೈಕಮಾಂಡ್ ಅನ್ನು ಮನವೊಲಿಸುವ ಪ್ರಯತ್ನವನ್ನು ಮುಂದೆ ರಾಜಣ್ಣ ಮಾಡ್ತಾರೆ. ಆಗ ಸರಿ ಹೋಗಬಹುದು ಎಂದಿದ್ದಾರೆ.

Share This Article