ರಮೇಶ್ ಬಿಜೆಪಿಗೆ ಹೋಗುತ್ತಿರುವುದು ಏಕೆ? – ಸ್ಫೋಟಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

Public TV
1 Min Read

ಬೆಳಗಾವಿ: ಅಣ್ಣ ಅಪ್ಪಿರಾವ್‍ನ ಮಹಾರಾಷ್ಟ್ರದ ಚಂದಗಢನಿಂದ ಶಾಸಕ ಮಾಡುವುದಾಗಿ ಪಣ ತೊಟ್ಟಿರುವ ಅಂಬಿರಾವ್‍ನೇ ರಮೇಶ್ ಜಾರಕಿಹೂಳಿ ಅವರನ್ನು ಬಿಜೆಪಿ ಕರೆದ್ಯೂಯುತ್ತಿದ್ದಾನೆ ಎಂದು ಸಚಿವ ಸತೀಶ್ ಜಾರಕಿಹೂಳಿ ಆರೋಪಿಸಿದ್ದಾರೆ.

ಬುಧವಾರ ಗೋಕಾಕನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಸಂದರ್ಭದಲ್ಲಿ ಸಹೋದರ ರಮೇಶ್ ವಿರುದ್ಧ ಸತೀಶ್ ಈ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ತನ್ನ ಅಣ್ಣ ಅಪ್ಪಿರಾವ್ ಪಾಟೀಲ್‍ನನ್ನು ಮಹಾರಾಷ್ಟ್ರದ ಚಂದಗಢ ನಿಂದ ಶಾಸಕನಾಗಿಸಲು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಬಿಜೆಪಿ ರಮೇಶ್ ಜಾರಕಿಹೂಳಿಯರನ್ನು ಬಿಜೆಪಿ ಸೇರಿಸಿ ಅವರಿಂದ ಲಾಭಿ ನಡೆಸಿ ಅಣ್ಣನಿಗೆ ಟಿಕೆಟ್ ಕೂಡಿಸು ಹುನ್ನಾರ ಮಾಡಿದ್ದಾರೆ ಎಂದು ಸತೀಶ್ ಬಹಿರಂಗ ಮಾಡಿದರು.

ಕಾಡನ್ನು ಕಡೆದು ಫಲವತ್ತಾದ ಭೂಮಿಯನ್ನು ಸಿದ್ಧಪಡಿಸಿದ್ದೇವೆ. ಭೂಮಿಯಲ್ಲಿ ಬೆಳೆದ ಗಿಡ- ಮರ, ಹೂವು-ಹಣ್ಣು ಕೊಡಬೇಕು ಎಂಬುದು ನಮ್ಮ ಬಯಕೆ. ಇದಕ್ಕಾಗಿ ಸಾಮ್ರಾಜ್ಯವನ್ನು ರಮೇಶ್ ಜಾರಕಿಹೊಳಿ ಕೈಯಲ್ಲಿ ಕೊಟ್ಟಿದ್ದೇವೆ. ಕೆಲವು ದಿನವರೆಗೆ ರಮೇಶ್ ನಿರ್ವಹಣೆ ಮಾಡಿದ್ದಾರೆ. ಅವರ ಅಳಿಯ ಅಂಬಿರಾಯ ಎಂಟ್ರಿ ಆದ್ಮೇಲೆ ಚಿತ್ರಣ ಬದಲಾಗಿದೆ. ಹೀಗಾಗಿ ಗೋಕಾಕ್ ಕ್ಷೇತ್ರದ ರೈಲು ಹಳಿ ತಪ್ಪಿದೆ ಅದನ್ನು ಸರಿಪಡಿಸಬೇಕಾಗಿದೆ. ಇದಕ್ಕೆ ನಿಮ್ಮ ಸಹಕಾರ ಬೇಕೆಂದು ಸತೀಶ್ ಸಭೆಯಲ್ಲಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *